ಅಂತರಾಷ್ಟ್ರೀಯ

ಎರಡೂವರೆ ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಹುಡುಗ ಸಿಕ್ಕಿದ್ದು ಪೋರ್ನೋಗ್ರಫಿ ಜಾಲದಲ್ಲಿ !

Pinterest LinkedIn Tumblr

ಮಕ್ಕಳ ಪೋರ್ನೋಗ್ರಫಿ ಮಾಡುತ್ತಿರುವ ಅನುಮಾನದಿಂದ ಜರ್ಮನಿಯ ಅಪಾರ್ಟ್​ಮೆಂಟ್​ ಒಂದಕ್ಕೆ ದಾಳಿ ನಡೆಸಿದ ಪೊಲೀಸರಿಗೆ ಅಲ್ಲಿ ಅಪ್ರಾಪ್ತ ಹುಡುಗನೊಬ್ಬ ಸಿಕ್ಕಿದ್ದಾನೆ. ಎರಡೂವರೆ ವರ್ಷಗಳಿಂದ ನಾಪತ್ತೆಯಾಗಿದ್ದ ಹುಡುಗ ಜೀವಂತವಾಗಿ ಸಿಕ್ಕಿದ್ದಾನೆ.

ಮಕ್ಕಳನ್ನು ಅಪಹರಣ ಮಾಡಿ ಅವರನ್ನು ಭಿಕ್ಷಾಟನೆ, ಕಳ್ಳತನ ಸೇರಿದಂತೆ ನಾನಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಾನವ ಕಳ್ಳಸಾಗಣೆಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜರ್ಮನಿಯಲ್ಲಿ ಮಕ್ಕಳನ್ನು ಅಪಹರಣ ಮಾಡಿ ಪೋರ್ನೋಗ್ರಫಿ (ನೀಲಿಚಿತ್ರ)ಗೆ ಕೂಡ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಮಕ್ಕಳ ಪೋರ್ನೋಗ್ರಫಿ ಮಾಡುತ್ತಿರುವ ಅನುಮಾನದಿಂದ ದಾಳಿ ನಡೆಸಿದ ಪೊಲೀಸರಿಗೆ ಅಲ್ಲಿ ಅಪ್ರಾಪ್ತ ಹುಡುಗನೊಬ್ಬ ಸಿಕ್ಕಿದ್ದಾನೆ. ಎರಡೂವರೆ ವರ್ಷಗಳಿಂದ ನಾಪತ್ತೆಯಾಗಿದ್ದ ಹುಡುಗ ಪಶ್ಚಿಮ ಜರ್ಮನಿಯ ಮನೆಯೊಂದರಲ್ಲಿ ಜೀವಂತವಾಗಿ ಸಿಕ್ಕಿದ್ದಾನೆ. ಎರಡೂವರೆ ವರ್ಷಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ 15 ವರ್ಷದ ಹುಡುಗ ಇದೀಗ ಪತ್ತೆಯಾಗಿದ್ದಾನೆ. ಆತ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದ ಪೋಷಕರು ಆತನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ, ಎರಡೂವರೆ ವರ್ಷಗಳೇ ಕಳೆದರೂ ಆತ ಎಲ್ಲೂ ಸಿಕ್ಕಿರಲಿಲ್ಲ.

ಮನೆಯೊಂದರಲ್ಲಿ ಮಕ್ಕಳ ಪೋರ್ನೋಗ್ರಫಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಇದ್ದಕ್ಕಿದ್ದಂತೆ ದಾಳಿ ನಡೆಸಿದ ಪೊಲೀಸರಿಗೆ ಆ ಮನೆಯಲ್ಲಿ ಅರೆಪ್ರಜ್ಞಾವಸ್ಥನಾಗಿ ಬಿದ್ದಿದ್ದ ಬಾಲಕ ಕಂಡಿದ್ದಾನೆ. ಆತನನ್ನು ತಮ್ಮ ವಶಕ್ಕೆ ಪಡೆದು ನಿಗಾ ವಹಿಸಿರುವ ಪೊಲೀಸರು ಮಕ್ಕಳ ಪೋರ್ನೋಗ್ರಫಿ ವಿತರಣೆ ಮಾಡುತ್ತಿದ್ದ 44 ವರ್ಷದ ವ್ಯಕ್ತಿ ಮತ್ತು ಆತನ ಜೊತೆಗಿದ್ದ ಇನ್ನೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ದಾಳಿ ನಡೆಸಿರುವ ಅಪಾರ್ಟ್​ಮೆಂಟ್​ನಲ್ಲಿ ಪೋರ್ನೋಗ್ರಫಿ ನಡೆಯುತ್ತಿತ್ತು ಎಂಬುದಕ್ಕೆ ಅನೇಕ ಪುರಾವೆಗಳು ಸಿಕ್ಕಿವೆ.

Comments are closed.