
ಕಾಬೂಲ್: ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಸತತ 2ನೇ ಬಾರಿಗೆ ಆ ದೇಶದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಸೆ. 28ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಈಗ ಬಹಿರಂಗಗೊಂಡಿದ್ದು, ಅದರಲ್ಲಿ ಘನಿ ಅವರು ಶೇ. 50.64ರಷ್ಟು ಮತಗಳಿಸಿ ಜಯಶಾಲಿಯಾಗಿದ್ದಾರೆ ಎಂದು ಇಲ್ಲಿನ ಚುನಾವಣಾ ಆಯೋಗ ಪ್ರಕಟಿಸಿದೆ.
ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಶೇ. 39.52ರಷ್ಟು ಮತ ಗಳಿಸಿದ್ದಾರೆ. ಆದರೆ, ಘನಿ ವಿಜಯದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಬ್ದುಲ್ಲಾ, ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಫಲಿತಾಂಶದ ಬಗ್ಗೆ ಅಭ್ಯರ್ಥಿಗಳು ತಮ್ಮ ಅಹವಾಲು ಸಲ್ಲಿಸಲು ಒಂದು ವಾರದವರೆಗೆ ಅವಕಾಶವಿರುತ್ತದೆ.
Comments are closed.