ಅಂತರಾಷ್ಟ್ರೀಯ

ಜಮಾತ್‌ ಉದ್‌ ದಾವಾ ಉಗ್ರ ಹಫೀಜ್‌ ಸಯೀದ್‌ ಅರ್ಜಿ ತಿರಸ್ಕೃತ

Pinterest LinkedIn Tumblr


ಲಾಹೋರ್‌: ಜಮಾತ್‌ ಉದ್‌ ದಾವಾ (ಜೆಯುಡಿ) ಉಗ್ರ ಹಫೀಜ್‌ ಸಯೀದ್‌ ಮತ್ತು ಇತರರು ತಮ್ಮ ಮೇಲಿರುವ 23 ಎಫ್ಐಆರ್‌ಗಳನ್ನು ವಜಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್‌ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದೆ.

ಉಗ್ರರಿಗೆ ನೆರವು ನೀಡಿದ್ದಾರೆಂಬ ಆರೋಪ ತಳ್ಳಿ ಹಾಕಿದ ಸಯೀದ್‌ ಪರ ವಕೀಲರು, ಸಯೀದ್‌ ಮತ್ತು ಜಮಾತ್‌ ಉದ್‌ ದಾವಾ ಸಂಘಟನೆಯ ಸದಸ್ಯರನ್ನು ಲಷ್ಕರ್‌ ಸದಸ್ಯರೆಂದು ಕರೆಯಬಾರದು ಎಂದು ಮನವಿ ಮಾಡಿದರು.

ಮತ್ತೂಂದೆಡೆ ಸಯೀದ್‌ ವಿರುದ್ಧ ಕಾನೂನಿನ ಅನ್ವಯ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪಾಕಿಸ್ಥಾನಕ್ಕೆ ಅಮೆರಿಕ ಸೂಚಿಸಿದೆ. ಈ ನಿಟ್ಟಿನಲ್ಲಿ ಲಾಹೋರ್‌ ಹೈಕೋರ್ಟ್‌ ನಿರ್ಧಾರ ಸರಿಯಾಗಿದೆ ಎಂದೂ ಹೇಳಿದೆ.

Comments are closed.