ಅಂತರಾಷ್ಟ್ರೀಯ

ರೋಗಿಗಳ ಸ್ತನ, ಗುಪ್ತಾಂಗ ಪರೀಕ್ಷೆ; ಭಾರತೀಯ ಮೂಲದ ವೈದ್ಯ ದೋಷಿ

Pinterest LinkedIn Tumblr


ಲಂಡನ್: ಕ್ಯಾನ್ಸರ್ ರೋಗಿಗಳ ಭಯವನ್ನೇ ಬಂಡವಾಳ ಮಾಡಿಕೊಂಡು ಅನಪೇಕ್ಷಿತವಾಗಿ ಮಹಿಳೆಯರ ಗುಪ್ತಾಂಗಗಳನ್ನು ಪರೀಕ್ಷಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯ ದೋಷಿ ಎಂದು ಬ್ರಿಟನ್ ಕೋರ್ಟ್ ಮಂಗಳವಾರ ತಿಳಿಸಿದೆ.

ಮಹಿಳಾ ರೋಗಿಗಳ ಭಯವನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ವೈದ್ಯ ಮನೀಸ್ ಶಾನ ಅಪರಾಧ ಸಾಬೀತಾಗಿರುವುದಾಗಿ ಕೋರ್ಟ್ ಹೇಳಿದೆ. ಮನೀಶ್ ಶಾ ಜನರಲ್ ಪ್ರಾಕ್ಟೀಷನರ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ 25 ಕೌಂಟ್ಸ್ ಗಳಲ್ಲಿ ದೋಷಿಯಾಗಿರುವುದಾಗಿ ಲಂಡನ್ ನ ಓಲ್ಡ್ ಬೈಲೈ ಕೋರ್ಟ್ ತೀರ್ಪು ನೀಡಿರುವುದಾಗಿ ವರದಿ ವಿವರಿಸಿದೆ.

ಹಾಲಿವುಡ್ ಸ್ಟಾರ್ ನಟಿ ಏಂಜಲಿನಾ ಜೋಲಿ ಹೆಸರು ಹೇಳಿ ವಂಚಿಸುತ್ತಿದ್ದ!

ಮುಂಜಾಗ್ರತಾ ಕ್ರಮವಾಗಿ ಹಾಲಿವುಡ್ ಸ್ಟಾರ್ ನಟಿ ಏಂಜಲಿನಾ ಜೋಲಿ ಸ್ತನ ಕ್ಯಾನ್ಸರ್ ಬಗ್ಗೆ ಮಾಡಿಸಿಕೊಂಡ ಚಿಕಿತ್ಸೆಯ ಕುರಿತು ಪ್ರಕಟಗೊಂಡಿದ್ದ ಸುದ್ದಿಯನ್ನೇ ತನ್ನ ಆಸ್ಪತ್ರೆಗೆ ಬಂದ ಮಹಿಳಾ ರೋಗಿಗಳ ತಪಾಸಣೆ ವೇಳೆ ಹೇಳುತ್ತಿದ್ದ. ಅದೇ ರೀತಿ ನೀವೂ ಕೂಡಾ ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮಹಿಳಾ ರೋಗಿಗಳಿಗೆ ಸಮಾಲೋಚನೆ ವೇಳೆ ತಿಳಿಸುತ್ತಿದ್ದ ಎಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಸ್ತನ ಪರೀಕ್ಷೆಯ ನೆಪದಲ್ಲಿಯೇ ಮಹಿಳಾ ರೋಗಿಯ ಗುಪ್ತಾಂಗ, ಗುದ ಪರೀಕ್ಷೆ ನಡೆಸಿ ನಂತರ ಲೈಂಗಿಕ ಶೋಷಣೆ ನಡೆಸುತ್ತಿದ್ದ. ನಿಜಕ್ಕೂ ವೈದ್ಯಕೀಯವಾಗಿ ಅಂತಹ ಪರೀಕ್ಷೆಯನ್ನು ನಡೆಸಬೇಕಾದ ಅಗತ್ಯವೇ ಇಲ್ಲ ಎಂದು ಪ್ರಾಸಿಕ್ಯೂಟರ್ ಕಾಟೆ ಬೆಕ್ಸ್ ವಿಚಾರಣೆ ವೇಳೆ ಜ್ಯೂರಿಗೆ ತಿಳಿಸಿರುವುದಾಗಿ ವರದಿ ಹೇಳಿದೆ.

ಹೆದರಿಕೆ ಎನ್ನುವುದು ನಂಬಲಾಗದ ವಿಷಯವಾಗಿದ್ದು, ಕೆಲವು ವಿಷಯಗಳು ಆರೋಗ್ಯದ ವಿಚಾರದಲ್ಲಿ ಕ್ಯಾನ್ಸರ್ ಗೆ ಪೂರಕವಾಗಿರಬಹುದು. ಆದರೆ ಶಾ ಅದನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದ. ರೋಗಿಗಳ ಭಯವನ್ನೇ ವೈಯಕ್ತಿಕ ತೃಪ್ತಿಗಾಗಿ ಬಳಸಿಕೊಂಡಿರುವುದಾಗಿ ಕಾಟೆ ಬೆಕ್ಸ್ ವಾದ ಮಂಡಿಸಿದ್ದರು.

ಹೀಗೆ ಸುಮಾರು 23 ಮಹಿಳಾ ರೋಗಿಗಳನ್ನು ಲೈಂಗಿಕ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡ ಆರೋಪ ಸಾಬೀತಾಗಿರುವುದಾಗಿ ಜಡ್ಜ್ ಅನ್ನೆ ಮೊಲೈನೆವುಕ್ಸ್ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು 2020ರ ಫೆಬ್ರುವರಿ 7ಕ್ಕೆ ಘೋಷಿಸುವುದಾಗಿ ತಿಳಿಸಿದರು.

Comments are closed.