ಅಂತರಾಷ್ಟ್ರೀಯ

ಫೇಸ್‌ಬುಕ್: ಸರ್ವರ್ ಅವಾಂತರ ತಂದಿಟ್ಟ ಸಮಸ್ಯೆ

Pinterest LinkedIn Tumblr


ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಪ್‌ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಇದಲ್ಲದೆ ಬದುಕೇ ಇಲ್ಲಎಂದು ಚಡಪಡಿಸುವವರ ಸಂಖ್ಯೆ ಅಗಾಧ. ಮೂರ್ನಾಲ್ಕು ದಿನಗಳ ಹಿಂದೆ ಫೇಸ್‌ಬುಕ್‌ಗೆ ಅಡಿ ಇರಿಸಿದ ಕೂಡಲೇ ”ಮನ್ನಿಸಿ ಏನೋ ಎಡವಟ್ಟಾಗಿದೆ,” (Sorry, Something went wrong). ಇದನ್ನು ಸರಿಪಡಿಸಲು ಕಾರ್ಯನಿರತವಾಗಿದ್ದೇವೆ ಎಂಬ ವಾಕ್ಯ ಕಾಣಿಸಿತು.

ಇನ್‌ಸ್ಟಾಗ್ರಾಂನಲ್ಲೂಇದೇ ಕತೆ. ಮುಖ್ಯ ಸರ್ವರ್‌ನ ಕಾನ್‌ಫಿಗರೇಶನ್‌ನಲ್ಲಿ ಬದಲಾವಣೆ ಮಾಡಿದ್ದರಿಂದ ಹೀಗಾಯ್ತು ಎನ್ನಲಾಗಿದೆ. ಫೇಸ್‌ಬುಕ್‌ನಲ್ಲಿ ಜೀವನ ಚರಿತ್ರೆ, ಭಾವಚಿತ್ರಗಳ ಬದಲು ಪೇಜ್‌ ಖಾಲಿ ಹೊಡೆಯುತ್ತಿತ್ತು. ಇದನ್ನು ಕಂಡು ಕೋಪಗೊಂಡವರು ಟ್ವಿಟರ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್‌ಗೆ ಮಂಗಳಾರತಿ ಮಾಡಿದರು.

15 ದಿನಗಳ ಹಿಂದೆ ಕೊಂಚ ಸಮಯ ಫೇಸ್‌ಬುಕ್‌ ಎಲ್ಲರನ್ನೂ ದಿವಂಗತರನ್ನಾಗಿಸಿತ್ತು. ಲಾಗ್‌ ಆನ್‌ ಆದ ಕೂಡಲೇ ಬಂಧು ಮಿತ್ರರ ಶ್ರದ್ಧಾಂಜಲಿ ಬರಹಗಳು ತುಂಬಿಕೊಂಡಿದ್ದವು. ಮೆಮೋರಿಯಲ್‌ ಪ್ರೊಫೈಲ್‌ಗಳೇ ರಾರಾಜಿಸುತ್ತಿದ್ದವು.

ಆದರೆ ಅದಾಗಿ ಸ್ವಲ್ಪ ಸಮಯದ ಬಳಿಕ ಮತ್ತೆ ಫೇಸ್‌ಬುಕ್ ಸರ್ವರ್ ಸಮಸ್ಯೆ ಸುಧಾರಿಸಿದೆ. ಬಳಕೆದಾರರಿಗೆ ಎಲ್ಲ ರೀತಿಯ ಪೇಜ್ ಅಪ್‌ಡೇಟ್ ಮತ್ತು ನ್ಯೂಸ್ ಫೀಡ್ ಲಭ್ಯವಾಗಿದೆ. ಈ ಮೊದಲು ಕೂಡ ಹಲವು ಬಾರಿ ಫೇಸ್‌ಬುಕ್ ಸರ್ವರ್ ಡೌನ್ ಸಮಸ್ಯೆ ಸೃಷ್ಟಿಯಾಗಿದ್ದರಿಂದ ಬಳಕೆದಾರರು ತೊಂದರೆಗೆ ಸಿಲುಕಿದ್ದರು.

Comments are closed.