ಅಂತರಾಷ್ಟ್ರೀಯ

ಎಟಿಎಂನೊಳಗೆ ದಂಪತಿ ಲೈಂಗಿಕ ಕ್ರಿಯೆ!

Pinterest LinkedIn Tumblr


ಸ್ಪೈನ್: ಒಂದೆಡೆ ಜನರು ರಸ್ತೆಯಲ್ಲಿ ಅಡ್ಡಾಡುತ್ತಿದ್ದರೆ, ಮತ್ತೊಂದೆಡೆ ಬ್ಯಾಂಕ್ ನ ಎಟಿಎಂ ಒಳಗೆ ಇಬ್ಬರು ನಗ್ನವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಘಟನೆ ಸ್ಬೈನ್ ನಲ್ಲಿ ನಡೆದಿದೆ.

ಪ್ರತ್ಯಕ್ಷದರ್ಶಿಯ ಪ್ರಕಾರ, ದಂಪತಿ ಎಟಿಎಂನೊಳಕ್ಕೆ ಹೋಗಿದ್ದರು. ಆದರೆ ಅವರು ಹಣ ವಿಥ್ ಡ್ರಾ ಮಾಡಲಿಲ್ಲ. ಬದಲಿಗೆ ಎಟಿಎಂ ಸುತ್ತ ಜನರು ಅಡ್ಡಾಡುತ್ತಿದ್ದರೂ ಕೂಡಾ ನಗ್ನವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವುದಾಗಿ ತಿಳಿಸಿರುವುದಾಗಿ ಡೈಲ್ ಮೇಲ್ ವರದಿ ಮಾಡಿದೆ.

ಘಟನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಅರ್ಧ ಗಂಟೆಯಲ್ಲಿಯೇ ಸ್ಥಳಕ್ಕೆ ಹಾಜರಾಗಿದ್ದರು. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ದಂಪತಿಗೆ ಇದು ನಿಮ್ಮ ಖಾಸಗಿ ಕ್ಷಣಗಳಿಗೆ ಉಪಯೋಗಿಸುವ ಸ್ಥಳವಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

ದಂಪತಿಯ ಮಾಹಿತಿಯನ್ನು ಪಡೆದುಕೊಂಡಿದ್ದು, ಯಾವುದೇ ಆರೋಪವನ್ನು ದಾಖಲಿಸಿಲ್ಲ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.

Comments are closed.