ಅಂತರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಈ ಕೋರ್ಸ್ ಪೂರ್ಣಗೊಳಿಸಿದವರು ಮದುವೆಯಾಗಲು ಸಿದ್ಧವಾದಂತೆ.

Pinterest LinkedIn Tumblr

ಮದುವೆ ನಂತ್ರ ಹೊಸ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅನೇಕರು ಇದಕ್ಕೆ ಹೆದರುತ್ತಾರೆ. ಮದುವೆ ನಂತ್ರದ ದಿನಗಳು ಹೇಗಿರಬಹುದು ಎಂಬ ಭಯ ಅವ್ರನ್ನು ಕಾಡುತ್ತದೆ. ಆದ್ರೆ ಇಂಡೋನೇಷ್ಯಾ ಜನರು ಇನ್ಮುಂದೆ ಮದುವೆ ಬಗ್ಗೆ ಹೆದರಬೇಕಾಗಿಲ್ಲ. ಇಂಡೋನೇಷ್ಯಾ ಶೀಘ್ರದಲ್ಲೇ ಮೂರು ತಿಂಗಳ ಮದುವೆ ಕೋರ್ಸ್ ಪರಿಚಯಿಸಲಿದೆ. ಈ ಕೋರ್ಸ್ ಪೂರ್ಣಗೊಳಿಸಿದವರು ಮದುವೆಯಾಗಲು ಸಿದ್ಧವಾದಂತೆ.

ಈ ಕೋರ್ಸ್ ಪೂರ್ಣಗೊಳಿಸುವಂತೆ ಇಂಡೋನೇಷ್ಯಾ ಸರ್ಕಾರ ಕಡ್ಡಾಯ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ. ಉಚಿತ ಕೋರ್ಸ್ ನಲ್ಲಿ ಸಂತಾನೋತ್ಪತ್ತಿ ಆರೋಗ್ಯ, ರೋಗ ತಡೆಗಟ್ಟುವಿಕೆ ಮತ್ತು ಶಿಶುಪಾಲನಾ ಸಲಹೆಗಳ ಕುರಿತು ತರಬೇತಿ ನೀಡಲಾಗುವುದು.

ಈ ಕಾರ್ಯಕ್ರಮವನ್ನು ಮಾನವ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಮನ್ವಯ ಸಚಿವರು ಹಿಂದಿನ ವಾರ ಘೋಷಿಸಿದ್ದರು. 2020ರಲ್ಲಿ ಇದು ಜಾರಿಗೆ ಬರಲಿದೆ. ಕೋರ್ಸ್‌ನ ತರಗತಿಗಳನ್ನು ಪಿಎಂಕೆ, ಧಾರ್ಮಿಕ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ವಿನ್ಯಾಸಗೊಳಿಸಲಿದೆ.

Comments are closed.