
ಬೆಂಗಳೂರು: ನಗರದಲ್ಲಿ ಮತ್ತೊಬ್ಬ ವಿಕೃತ ಕಾಮಿ ಕಾಣಿಸಿಕೊಂಡಿದ್ದಾನೆ. ಮತ್ತೆ ವಿಕೃತ ಕಾಮಿ ಉಮೇಶ್‍ರೆಡ್ಡಿ ನಗರಕ್ಕೆ ಎಂಟ್ರಿ ಪಡೆದಿದ್ದಾನೆಯೇ ಎಂದು ಗಾಬರಿಯಾಗಬೇಡಿ. ಈತ ಮತ್ತೊಬ್ಬ ವಿಕೃತ ಕಾಮಿ.ಎಂಬಿಎ ಪದವೀಧರನಾಗಿರುವ ಈ ಕಾಮಿ ಸ್ಕೋಡಾ ಕಾರು ಬಳಕೆ ಮಾಡುತ್ತಿದ್ದು, ತನ್ನನ್ನು ಶಾಸಕರ ಮಗನೆಂದು ನಂಬಿಸಿ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಳ್ಳುತ್ತಿದ್ದ.
ತಮಿಳುನಾಡಿನ ತಿರುಚಿ ಜಿಲ್ಲೆಯ ವೀರೇಶ್ವರಂನ ನಿವಾಸಿ ಕಾರ್ತಿಕ್‍ರೆಡ್ಡಿಯೇ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಇದೀಗ ಹಲಸೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದುವರೆಗೂ ಮೂವರು ಯುವತಿಯರ ಮೇಲೆ ಅತ್ಯಾಚಾರ ನಡೆಸಿ ಮತ್ತೆ ಮೂವರು ಯುವತಿಯರ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಆರೋಪಕ್ಕೆ ಗುರಿಯಾಗಿದ್ದಾನೆ.
ಇದು ಬೆಳಕಿಗೆ ಬಂದಿರುವ ಸತ್ಯವಷ್ಟೆ. ಇನ್ನೂ ಹಲವಾರು ಯುವತಿಯರು ಈತನ ಕಾಮತೃಷೆಗೆ ಬಲಿಯಾಗಿರುವ ಸಾಧ್ಯತೆ ಇದೆ. ಆದರೆ, ಮಾನಕ್ಕೆ ಅಂಜಿ ಕೆಲವರು ದೂರು ಕೊಟ್ಟಿಲ್ಲ.ತಾನು ಅತ್ಯಾಚಾರ ನಡೆಸಿದ ಯುವತಿಯರ ಒಳ ಉಡುಪು ಕದಿಯುತ್ತಿದ್ದುದೇ ಅಲ್ಲದೆ ಮಾಲ್‍ಗಳಿಗೆ ತೆರಳಿ ಮಹಿಳೆಯರ ಒಳ ಉಡುಪು ಖರೀದಿ ಮಾಡಿ ತನ್ನ ಬಳಿ ಇಟ್ಟುಕೊಂಡಿದ್ದ.
ಕೇಂದ್ರ ಸರ್ಕಾರದ ನಿವೃತ್ತ ನೌಕರನ ಪುತ್ರನಾಗಿರುವ ಕಾರ್ತಿಕ್ ರೆಡ್ಡಿ ಎಂಬಿಎ ಪದವೀಧರ. ಈತ ಚೆನ್ನೈನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೂ ಹಲವಾರು ಅತ್ಯಾಚಾರ ನಡೆಸಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಅತ್ಯಾಚಾರ ಆರೋಪದ ಮೇಲೆ ತಮಿಳುನಾಡು ಪೊಲೀಸರು ಈತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಾರ್ತಿಕ್ ರೆಡ್ಡಿ ಚೆನ್ನೈನಿಂದ ನಗರಕ್ಕೆ ಬಂದು ತನ್ನ ನೀಚ ಕೃತ್ಯವನ್ನು ಮುಂದುವರಿಸಿದ್ದ. ಸೂಟುಬೂಟು ಧರಿಸಿ ಸ್ಕೋಡಾ ಕಾರಿನಲ್ಲಿ ಬರುತ್ತಿದ್ದ ಕಾರ್ತಿಕ್‍ರೆಡ್ಡಿ ಯುವತಿಯರಿಗೆ ತಾನು ಹೈಟೆಕ್ ಹೊಟೇಲ್ ಮಾಲೀಕ, ನಿಮಗೆ ಹೊಟೇಲ್‍ನಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಅತ್ಯಾಚಾರವೆಸಗಿ ಪರಾರಿಯಾಗುತ್ತಿದ್ದ.
ಹಲಸೂರು, ಮಹದೇವಪುರ ಮತ್ತಿತರ ಕಡೆ ಮೂವರು ಯುವತಿಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿದೆ. ಇನ್ನೂ ಮೂವರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಈತನ ಮೇಲಿದೆ. ಈತನ ಕಾಮತೃಷೆಗೆ ಇನ್ನಿತರ ಹಲವಾರು ಯುವತಿಯರು ಬಿದ್ದಿರುವ ಸಾಧ್ಯತೆಯಿದ್ದು, ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಶರಣಪ್ಪ ತಿಳಿಸಿದ್ದಾರೆ.
ಮಾಲ್, ಹೊಟೇಲ್ ಮತ್ತು ಪಬ್‍ಗಳಿಗೆ ಹೋಗುತ್ತಿದ್ದ ಈ ಕಾಮಿ ಮಹಿಳೆಯರಿಗೆ ಮೀಸಲಿಟ್ಟ ಕೌಂಟರ್‍ನಲ್ಲೇ ವ್ಯಾಪಾರ ಮಾಡುತ್ತಿದ್ದ. ಇದನ್ನು ಪ್ರಶ್ನಿಸುವವರಿಗೆ ತಾನೊಬ್ಬ ಉದ್ಯಮಿ. ಶಾಸಕರ ಮಗನೆಂದು ಹೇಳಿ ಕೈ ತುಂಬ ಟಿಪ್ಸ್ ನೀಡುತ್ತಿದ್ದ.
ಮಹಿಳಾ ಕೌಂಟರ್‍ನಲ್ಲಿ ಅಂದವಾಗಿ ಕಾಣುವ ಯುವತಿಯರನ್ನು ಪರಿಚಯ ಮಾಡಿಕೊಂಡು ಸ್ಕೋಡಾ ಕಾರಿನಲ್ಲಿ ಐಶಾರಾಮಿ ಹೊಟೇಲ್‍ಗೆ ಕರೆದೊಯ್ದು ಅತ್ಯಾಚಾರ ನಡೆಸುತ್ತಿದ್ದ. ಕಾರ್ತಿಕ್‍ರೆಡ್ಡಿಯನ್ನು ಬಂಧಿಸಿದ್ದಾಗ ಆತನ ಕಾರಿನಲ್ಲಿ ಮಹಿಳೆಯರ ಹೊಸ ಮತ್ತು ಹಳೆ ಒಳ ಉಡುಪುಗಳು ದೊರೆತಿದ್ದು, ಈ ಕುರಿತಂತೆ ಪ್ರಶ್ನಿಸಿದಾಗ ಆತ ವಿಚಿತ್ರವಾಗಿ ವರ್ತಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಾಯಕ ಮಹಿಳೆಯರ ಜೀವನ ದೊಂದಿಗೆ ಚೆಲ್ಲಾಟವಾಡುವ ಇಂತಹ ವಿಕೃತ ಕಾಮಿಗಳ ಬಗ್ಗೆ ಎಚ್ಚರಿಕೆ ವಹಿಸ ಬೇಕೆಂದು ಡಿಸಿಪಿ ಶರಣಪ್ಪ ಮನವಿ ಮಾಡಿಕೊಂಡಿದ್ದಾರೆ.
Comments are closed.