ಅಂತರಾಷ್ಟ್ರೀಯ

ಶ್ರೀಲಂಕಾದಲ್ಲಿ ಸಹೋದರರು ಅಧಿಕಾರಕ್ಕೆ: ಗೊಟಬಯ ಅಧ್ಯಕ್ಷ, ಮಹಿಂದಾ ಪ್ರಧಾನಿ!

Pinterest LinkedIn Tumblr


ಕೊಲಂಬೊ: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಗೊಟಬಯ ರಾಜಪಕ್ಸ ಅವರು ತಮ್ಮ ಹಿರಿಯ ಸಹೋದರ ಹಾಗೂ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಲಂಕಾದಲ್ಲಿಅಣ್ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದಂತಾಗಿದೆ.

ಗೊಟಬಯ ವಿರುದ್ಧ ಸ್ಪರ್ಧಿಸಿದ್ದ ಸಜಿತ್‌ ಪ್ರೇಮದಾಸ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿಹೀನಾಯ ಸೋಲುಂಡ ಹಿನ್ನೆಲೆಯಲ್ಲಿಬುಧವಾರ ಪ್ರಧಾನಿ ಹುದ್ದೆಗೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದರು.

ಹಿಂದೆ ಮಾಜಿ ಸೇನಾಧಿಕಾರಿ ಗೊಟಬಯ ಮತ್ತು ಮಹಿಂದಾ ಇಬ್ಬರೂ ಒಂದಾಗಿ ಚಳವಳಿ ನಡೆಸುವ ಮೂಲಕ ಶ್ರೀಲಂಕಾದಲ್ಲಿಎಲ್‌ಟಿಟಿಇ ಸಾಮ್ರಾಜ್ಯವನ್ನು ಪತನಗೊಳಿಸಿದ್ದರು.

ಬುಹುಮತ ಇದ್ದರೂ ರಾಜೀನಾಮೆ: ಮಾಜಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್‌ ನ್ಯಾಷನಲ್‌ ಪಾರ್ಟಿಗೆ ಲಂಕಾ ಸಂಸತ್ತಿನಲ್ಲಿ ಬಹುಮತವಿದೆ. ಆದರೆ ತಮ್ಮ ಅಭ್ಯರ್ಥಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಹೊಣೆ ಹೊತ್ತು, ಜನಾದೇಶವನ್ನು ಗೌರವಿಸುವುದಾಗಿ ರನಿಲ್‌ ಹೇಳಿದ್ದಾರೆ.

Comments are closed.