ಅಂತರಾಷ್ಟ್ರೀಯ

ಈ ಹಳ್ಳಿಯಿಂದ ಹೊರಗೆ ಹೋಗುವುದಕ್ಕೆ ಹೆಲಿಕಾಪ್ಟರ್ ಟ್ಯಾಕ್ಸಿಯೇ ಬೇಕು..!

Pinterest LinkedIn Tumblr

ಹಳ್ಳಿಗಳು ಅಂದರೆ ಏನೇನೂ ವ್ಯವಸ್ಥೆ ಇಲ್ಲದ, ಬಡತನವೇ ಹಾಸು- ಹೊದ್ದಂತಿರುತ್ತದೆ ಎಂಬ ಕಲ್ಪನೆ ಕಣ್ಣೆದುರು ಬರಬಹುದು. ಆದರೆ ಚೀನಾದ ಈ ಹಳ್ಳಿ ಬಹಳ ಡಿಫರೆಂಟ್. ಈ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇದೆ. ಅಷ್ಟೇ ಅಲ್ಲ, ಎಲ್ಲ ಖಾತೆಗಳಲ್ಲೂ ತಲಾ ಒಂದು ಮಿಲಿಯನ್ ಯುವಾನ್ (ಒಂದು ಕೋಟಿ ರುಪಾಯಿಗೂ ಹೆಚ್ಚು) ಇದೆ.

ಆ ಹಳ್ಳಿಯ ಹೆಸರು ಹುಯಾಕ್ಸಿ. ಇನ್ನೂರಾ ನಲವತ್ತು ಎಕರೆ ವ್ಯಾಪ್ತಿಯಲ್ಲಿ ಈ ಹಳ್ಳಿ ಇದೆ. ಜತೆಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು ಅಂದರೆ ವಾಯು ಯಾನವೇ ಆಗಬೇಕು. ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ. ಈ ಹಳ್ಳಿಯಿಂದ ಹೊರಗೆ ಹೋಗುವುದಕ್ಕೆ ಹೆಲಿಕಾಪ್ಟರ್ ಟ್ಯಾಕ್ಸಿ ದೊರೆಯುತ್ತದೆ.

ಹುಯಾಕ್ಸಿಯಲ್ಲಿ ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಈ ಹಳ್ಳಿ ಚೀನಾದಲ್ಲೇ ಅತ್ಯಂತ ಶ್ರೀಮಂತವಾದದ್ದು. ಈ ಹಳ್ಳಿ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಆರೋಗ್ಯ ಸೇವೆ, ಶಿಕ್ಷಣ, ಮನೆ ಎಲ್ಲವೂ ಉಚಿತ. ಆದರೆ ಎಲ್ಲರಿಗೂ ಇಲ್ಲ. ಇಲ್ಲಿನ ಸ್ಥಳೀಯರಿಗೆ ಮಾತ್ರ. ಮಾಧ್ಯಮಗಳ ವರದಿಯ ಪ್ರಕಾರ, ಚೆನೀಸ್ ಕಮ್ಯುನಿಸ್ಟ್ ಪಕ್ಷದಿಂದ ಆಯ್ಕೆಯಾಗಿದ್ದ ಈ ಹಳ್ಳಿಯ ಮಾಜಿ ಕಾರ್ಯದರ್ಶಿ ವು ರೆನಾಬೋ ಅವರೇ ಈ ಬದಲಾವಣೆಯ ಹರಿಕಾರರು.

ಅಂದ ಹಾಗೆ ಈ ಹಳ್ಳಿಯಲ್ಲಿ ಇರುವವರ ಆಸ್ತಿಯನ್ನು ನಾಯಕರೇ ನೋಡಿಕೊಳ್ಳುತ್ತಾರೆ. ಇಲ್ಲಿಂದ ಆಚೆ ಹೋಗಲು ನಿರ್ಧರಿಸುವವರು ಆ ಆಸ್ತಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ.

Comments are closed.