ಅಂತರಾಷ್ಟ್ರೀಯ

ಮೂರು ಮಕ್ಕಳು, ಪತ್ನಿಯನ್ನು ಕೊಂದು ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ!

Pinterest LinkedIn Tumblr


ಸ್ಯಾನ್ ಡಿಯಾಗೋ: ಮೂವರು ಸಣ್ಣ ಪ್ರಾಯದ ಮಕ್ಕಳು ಮತ್ತು ಹೆಂಡತಿಯನ್ನು ಕೊಂದು ವ್ಯಕ್ತಿಯೊಬ್ಬ ತಾನೂ ಶೂಟ್ ಮಾಡಿಕೊಂಡು ಸತ್ತ ಘಟನೆ ಅಮೇರಿಕಾದ ಸ್ಯಾನ್ ಡಿಯಾಗೋದಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, ಓರ್ವ ಬಾಲಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡಿನ ಶಬ್ಧ ಕೇಳಿ ನೆರೆ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಯಾನ್ ಡಿಯಾಗೋ ಪೊಲೀಸರು ಸ್ಥಳಕ್ಕಾಗಮಿಸಿದಾಗ ಮೂರು ವರ್ಷದ ಮಗ. ಮತ್ತು ದಂಪತಿಗಳಿಬ್ಬರು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. 5, 9, 11 ವರ್ಷ ಪ್ರಾಯದ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತಾದರೂ ಇಬ್ಬರು ಮಕ್ಕಳು ಅಸುನೀಗಿದ್ದಾರೆ ಎನ್ನಲಾಗಿದೆ.

ಗಂಡ- ಹೆಂಡತಿ ಜಗಳವಾಡುತ್ತಿದ್ದು, ಈ ಜಗಳ ಈ ದುರಂತದಲ್ಲಿ ಅಂತ್ಯ ಕಂಡಿದೆ. ಮೃತರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

Comments are closed.