ಅಂತರಾಷ್ಟ್ರೀಯ

ಅಪ್ಪನಿಗಾಗಿ ಆಸ್ಪತ್ರೆಯಲ್ಲಿ ಮದುವೆಯಾದ ಪುತ್ರ!

Pinterest LinkedIn Tumblr


ಟೆಕ್ಸಾಸ್: ಜೋಡಿಯೊಂದು ಆಸ್ಪತ್ರೆಯಲ್ಲಿ ಮದುವೆಯಾಗಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಮೆರಿಕಾದ ಟೆಕ್ಸಾಸ್ ನಗರದ ಆಸ್ಪತ್ರೆಯಲ್ಲಿ ಈ ವಿಶೇಷ ಮದುವೆ ನಡೆದಿದೆ.

ಆಲಿಯಾ ಮತ್ತು ಮಿಶೆಲ್ ಥಾಮಸನ್ ಆಸ್ಪತ್ರೆಯ ಐಸಿಯುನಲ್ಲಿ ಒಬ್ಬರಿಗೊಬ್ಬರು ರಿಂಗ್ ತೊಡಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕ್ಯೂಟ್ ಮದುವೆಗೆ ಆಸ್ಪತ್ರೆಯ ಸಿಬ್ಬಂದಿ ಸಾಕ್ಷಿಯಾಗಿದ್ದಾರೆ.

ಮದುವೆ ಬಳಿಕ ಪ್ರತಿಕ್ರಿಯಿಸಿರುವ ವರ ಮಿಶೆಲ್, ತಂದೆಗೆ ಕೆಲವೇ ದಿನಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆ ನಡೆಯಲಿದೆ. ಸರ್ಜರಿ ಬಳಿಕ ತಂದೆ ಹೆಚ್ಚು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಸರ್ಜರಿಗೂ ಮುನ್ನ ತಂದೆಗೆ ಸರ್ಪ್ರೈಸ್ ನೀಡುವ ಉದ್ದೇಶದಿಂದ ಆಸ್ಪತ್ರೆಯಲ್ಲಿಯೇ ಮದುವೆ ಆಗಿದ್ದೇನೆ ಎಂದು ಹೇಳುತ್ತಾರೆ.

ಆಲಿಯಾ ಮತ್ತು ಮಿಶೆಲ್ ಮದುವೆ ಮಾರ್ಚ್ ನಲ್ಲಿ ನಿಗದಿಯಾಗಿತ್ತು. ಕೆಲ ದಿನಗಳ ಹಿಂದೆ ಇಬ್ಬರ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದರು. ಇತ್ತ ಮಿಶೆಲ್ ತಂದೆ ಸಹ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಮಿಶೆಲ್ ಮದುವೆಯನ್ನು ಅಪ್ಪನ ಸಮ್ಮುಖದಲ್ಲಿಯೇ ಆಗಿದ್ದಾರೆ. ಈ ವಿಶೇಷ ಮದುವೆಯಲ್ಲಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಮತ್ತು ಪಕ್ಕದ ಬೆಡ್ ನಲ್ಲಿದ್ದ ರೋಗಿ ಭಾಗಿಯಾಗಿ ನವದಂಪತಿಗೆ ಶುಭಾಶಯ ತಿಳಿಸಿದ್ದಾರೆ.

Comments are closed.