ಅಂತರಾಷ್ಟ್ರೀಯ

ಫೇಸ್‌ಬುಕ್ 320 ಕೋಟಿ ನಕಲಿ ಖಾತೆ ತೆಗೆದುಹಾಕಲು ಯಂತ್ರ ಆಧಾರಿತ ತಂತ್ರಜ್ಞಾನದ ಬಳಕೆ

Pinterest LinkedIn Tumblr

ವಾಷಿಂಗ್ಟನ್ : ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಫೇಸ್‌ಬುಕ್ 320 ಕೋಟಿಗೂ ಅಧಿಕ ನಕಲಿ ಖಾತೆಗಳನ್ನು ಕಿತ್ತುಹಾಕಿದೆ. ಜತೆಗೆ ಇದೇ ಅವಧಿಯಲ್ಲಿ 11.4 ಮಿಲಿಯನ್‌ನಷ್ಟು ದ್ವೇಷ ಕಾರುವ ಪೋಸ್ಟ್‌ಗಳನ್ನು ಸಹ ನಿರ್ಮೂಲನೆ ಮಾಡಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಫೇಸ್‌ಬುಕ್ ಸುಮಾರು 5.4 ಬಿಲಿಯನ್ ನಕಲಿ ಖಾತೆಗಳನ್ನು ಮತ್ತು 15.5 ಮಿಲಿಯನ್ ದ್ವೇಷ ಭಾಷಣದ ಪೋಸ್ಟ್‌ಗಳನ್ನು ತೆಗೆದುಹಾಕಿದೆ.

‘ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ನಾವು ನಕಲಿ, ನಿಂದನಾತ್ಮಕ ಖಾತೆಗಳನ್ನು ತೆರೆಯುವ ಪ್ರಯತ್ನಗಳನ್ನು ಪತ್ತೆಹಚ್ಚುವ ಮತ್ತು ಅವುಗಳನ್ನು ಬ್ಲಾಕ್ ಮಾಡುವ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದೇವೆ. ಪ್ರತಿದಿನವೂ ನಕಲಿ ಖಾತೆ ಸೃಷ್ಟಿಸುವ ಲಕ್ಷಾಂತರ ಪ್ರಯತ್ನಗಳನ್ನು ಈ ಪತ್ತೆಹಚ್ಚುವ ವ್ಯವಸ್ಥೆ ಮೂಲಕ ತಡೆದದ್ದೇವೆ’ ಎಂದು ಸಾಮಾಜಿಕ ಜಾಲತಾಣಗಳ ಮುಂಚೂಣಿಯಲ್ಲಿರುವ ಸಂಸ್ಥೆ ಬುಧವಾರ ತಿಳಿಸಿದೆ.

ನಕಲಿ ಖಾತೆಗಳಲ್ಲಿ ಹೆಚ್ಚಿನವು ಫೇಸ್‌ಬುಕ್‌ನ ಮಾಸಿಕ ಸಕ್ರಿಯ ಬಳಕೆದಾರರ (ಎಂಎಯು) ಪಟ್ಟಿಯಲ್ಲಿ ಸೇರಿಕೊಳ್ಳುವ ಮೊದಲೇ ನೋಂದಣಿಯಾದ ಕೆಲವೇ ನಿಮಿಷಗಳಲ್ಲಿ ಪತ್ತೆಯಾಗಿವೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ಸಮೀಪಿಸುತ್ತಿದ್ದು, ಸುಳ್ಳು ಸುದ್ದಿಗಳು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಫೇಸ್‌ಬುಕ್ ನಕಲಿ ಖಾತೆಗಳ ಮೇಲೆ ಹೆಚ್ಚಿನ ನಿಗಾವಹಿಸಿವೆ.

ಫೇಸ್‌ಬುಕ್‌ನಲ್ಲಿನ ಮಾಸಿಕ ಸಕ್ರಿಯ ಬಳಕೆದಾರರಲ್ಲಿ ಜಗತ್ತಿನಾದ್ಯಂತ ಸರಿಸುಮಾರು ಶೇ 5ರಷ್ಟು, ಅಂದರೆ ಸುಮಾರು 2.5 ಬಿಲಿಯನ್‌ನಷ್ಟು ನಕಲಿ ಖಾತೆಗಳು ಸೃಷ್ಟಿಯಾಗುವುದು ಮುಂದುವರಿದಿದೆ. ಫೇಸ್‌ಬುಕ್‌ನಿಂದ ದ್ವೇಷಕಾರುವ ಮಾತುಗಳಿರುವ ಪೋಸ್ಟ್‌ಗಳನ್ನು ತೆಗೆದುಹಾಕುವ ಕಾರ್ಯ ಚುರುಕಾಗಿ ನಡೆಯುತ್ತಿದೆ. ಹಲವು ವಿಭಿನ್ನ ಮಾದರಿಗಳ ಮೂಲಕ ದ್ವೇಷ ಸಂದೇಶಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಲು ಯಂತ್ರ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ.

Comments are closed.