ಅಂತರಾಷ್ಟ್ರೀಯ

ಈ `ಗರ್ಭಿಣಿ’ಯ ಹೊಟ್ಟೆಯಲ್ಲಿ ಮಗುವಿರಲಿಲ್ಲ…!

Pinterest LinkedIn Tumblr


ಅಕ್ರಮ ಮಾದಕ ದ್ರವ್ಯದ ದಂಧೆ ಮೂಲಕ ಪ್ರತಿ ವರ್ಷ ಕೋಟ್ಯಂತರ ರೂಪಾಯಿಯ ವಹಿವಾಟು ಕಳ್ಳದಾರಿಯಲ್ಲೇ ನಡೆಯುತ್ತದೆ. ಅದರಲ್ಲೂ ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳಾದ ಅರ್ಜೆಂಟಿನಾ ಮತ್ತು ಮೆಕ್ಸಿಕೋದಲ್ಲಿ ಈ ಮಾದಕ ದ್ರವ್ಯದ ದಂಧೆ ಸ್ವಲ್ಪ ಹೆಚ್ಚೇ ಇದೆ. ಈ ದಂಧೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನವನ್ನೆಲ್ಲಾ ಬಳಸಲಾಗುತ್ತಿದೆ. ಆದರೆ, ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ ಕಳ್ಳಸಾಗಾಣಿಕೆದಾರರು ರಂಗೋಲಿ ಕೆಳಗೆ ತೂರುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ, ಅಕ್ರಮ ಮಾದಕ ದ್ರವ್ಯಗಳ ಸಾಗಾಟದ ವಿಧಾನ ಬದಲಾಗುತ್ತಿದೆ. ಆದರೆ, ಎಷ್ಟು ದಿನ ಈ ಕಳ್ಳ ಜೀವನ ನಡೆಸಲು ಸಾಧ್ಯ…? ಸಿಕ್ಕಿಬೀಳಲೇಬೇಕು. ಸದ್ಯ ಅರ್ಜೆಂಟಿನಾದ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.

`ಗರ್ಭಿಣಿ’ಯ ಹೊಟ್ಟೆಯಲ್ಲಿತ್ತು ಡ್ರಗ್ಸ್‌…!
ಅರ್ಜೆಂಟಿನಾದ ಅಧಿಕಾರಿಗಳು ಇತ್ತೀಚೆಗೆ `ಗರ್ಭಿಣಿ’ಯೊಬ್ಬಳನ್ನು ಅನುಮಾನದ ಮೇಲೆ ವಿಚಾರಣೆ ನಡೆಸಿದ್ದರು. ಆಗ ಅಧಿಕಾರಿಗಳಿಗೆ ಗೊತ್ತಾಗಿದ್ದು ಘೋರ ಸತ್ಯ. ಅದೇನೆಂದರೆ, ಈಕೆ ಗರ್ಭಿಣಿಯೇ ಆಗಿರಲಿಲ್ಲ…! ಮಾದಕ ದ್ರವ್ಯ ಸಾಗಾಟ ಮಾಡಲೆಂದೇ ಹೊಟ್ಟೆಯನ್ನು ತುಂಬು ಗರ್ಭಿಣಿಯಂತೆ ಮಾಡಿ ಅದರೊಳಗೆ ಗಾಂಜಾವನ್ನು ಇಟ್ಟು ಈಕೆ ಸಾಗಿಸುತ್ತಿದ್ದಳು. ಆದರೆ, ಜಾಣ ಅಧಿಕಾರಿಗಳೆದುರು ಈಕೆಯ ಕಳ್ಳಾಟಕ್ಕೆ ಬ್ರೇಕ್ ಬಿದ್ದಿತ್ತು. ಬಳಿಕ ಅಧಿಕಾರಿಗಳು ಈಕೆಯನ್ನು ಬಂಧಿಸಿದ್ದಾರೆ.

ಈಕೆ ತನ್ನ `ನಕಲಿ’ ಹೊಟ್ಟೆಯಲ್ಲಿ 15 ಪ್ಯಾಕೇಟಿನಷ್ಟು ಮಾರಿಜುವಾನವನ್ನು ಸಾಗಿಸುತ್ತಿದ್ದಳು. ಇನ್ನು, ಈಕೆಯ ಜೊತೆಗಿದ್ದಾತ ಲಗೇಜಿನೊಳಗೆ ಇನ್ನಷ್ಟು ಪ್ಯಾಕೇಟ್ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ. ಇವರಿಂದ ಒಟ್ಟು 5.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ಅರ್ಜೆಂಟಿನಾದ ಗಡಿಭಾಗದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದಾಗ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಇತ್ತೀಚೆಗೊಬ್ಬ ಕೇರಳದಲ್ಲಿ ಇದೇ ರೀತಿ ಚಿನ್ನ ಕಳ್ಳಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ. ಈತ ತಲೆಯನ್ನು ಬೋಳಿಸಿ ಅದರೊಳಗೆ ಚಿನ್ನ ಇಟ್ಟು ಬಳಿಕ ವಿಗ್ ಹಾಕಿಕೊಂಡು ಸ್ಟೈಲ್ ಆಗಿ ಕೊಲ್ಲಿ ರಾಷ್ಟ್ರದಿಂದ ಏರ್‌ ಪೋರ್ಟಿಗೆ ಬಂದಿದ್ದ. ಆಗ ಅಧಿಕಾರಿಗಳು ಈತನನ್ನು ಹಿಡಿದು ಕಂಬಿ ಹಿಂದೆ ತಳ್ಳಿದ್ದರು.

Comments are closed.