ಕರ್ನಾಟಕ

ಹೊಸಕೋಟೆ ಉಪಚುನಾವಣೆ: ಎಂಟಿಬಿ ನಾಗರಾಜ್ ಅಸ್ತಿ ಮೌಲ್ಯ 1 ಸಾವಿರದ 215 ಕೋಟಿ!

Pinterest LinkedIn Tumblr


ಚಿಕ್ಕಬಳ್ಳಾಪುರ(ನ.15): ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್​ ಕಣಕ್ಕಿಳಿದಿದ್ದಾರೆ. ಈಗಾಲೇ ಕರ್ನಾಟಕ ಚುನಾವಣಾ ಆಯೋಗಕ್ಕೆ ನಾಮಪತ್ರವನ್ನೂ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಎಂಟಿಬಿ ನಾಗರಾಜ್ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂ. ಎಂದು ಘೋಷಣೆ ಮಾಡಿದ್ದಾರೆ.

ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಎಂಟಿಬಿ ನಾಗರಾಜ್​​ ಆಯೋಗಕ್ಕೆ ನೀಡಿರುವ ಆಸ್ತಿಯ ವಿವರಗಳು ಇಂತಿದೆ. ಅದರಲ್ಲಿ ​ 1,12,02,23,637 ರೂ. ಬಿಲಿಯನ್​ ಎಂಟಿಬಿ ನಾಗರಾಜ್ ಹೆಸರಿನಲ್ಲಿದ್ದರೆ, 71,89,65,570 ಕೋಟಿ ಪತ್ನಿ ಶಾಂತಕುಮಾರಿ ಹೆಸರಿನಲ್ಲಿದೆ. ಹಾಗೆಯೇ ಎಂಟಿಬಿ ಕೈಯಲ್ಲಿರುವ ನಗದು 89,04,927 ರೂ.ಗಳು. ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ, ಖಾಯಂ ಠೇವಣಿಯಾಗಿ 166.97 ಕೋಟಿ ರೂ. ಇದೆ. ಇನ್ನು, ಎಂಟಿಬಿ ಎಸ್ಟೇಟ್ಸ್ ಅಂಡ್ ಪಾರ್ಪರ್ಟಿಸ್ ಪಾಲುದಾರಿಕೆ ಸಂಸ್ಥೆಯಲ್ಲಿ 141 ಕೋಟಿ ಇದೆ. ಎಲ್​ಐಸಿ, ಪಿಎನ್​ಬಿ ವಿಮೆಗಳು 64,76,009 ಲಕ್ಷ ಬೆಲೆಬಾಳುತ್ತವೆ.

ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲವಾಗಿ 272 ಕೋಟಿ ನೀಡಿದ್ದಾರೆ. 5,99,78,832 ಕೋಟಿ ಮೌಲ್ಯದ 3 ಐಷಾರಾಮಿ ಕಾರುಗಳಿವೆ. 2,54,13,964 ಬೆಲೆ ಬಾಳುವ 6 ಐಷಾರಾಮಿ ಕಾರುಗಳಿವೆ. ಎಂಟಿಬಿ ಮತ್ತು ಶಾಂತಕುಮಾರಿ ಹೆಸರಿನಲ್ಲಿ 618 ಕೋಟಿ ಸ್ಥಿರಾಸ್ತಿ ಇದ್ದರೆ, 437.15 ಕೋಟಿ ಚರಾಸ್ತಿ ಇದೆ. 3.720 ಕೋಟಿ ಮೌಲ್ಯದ 3606 ಗ್ರಾಂ ಚಿನ್ನ ಇದೆ.

ಒಟ್ಟು ಸಾಲ 1,93,84,706. ಪತ್ನಿ 21,60,267. ಕುಟುಂಬದ ಒಟ್ಟು ಆಸ್ತಿ 221,26,16,590 ಇದೆ. ಮೇ.ತ್ರಿಶೂಲ್ ಪವರ್ ಪ್ರೈ.ಲಿ, 4‌ ಮೆಗಾವ್ಯಾಟ್, ಮೆ.ಶ್ರೀಸಾಯಿದೀಪ್ತಿ ಪವರ್ ಪ್ರೈ.ಲಿ 1.5 ಮೆಗಾವ್ಯಾಟ್, ಮೇ.ಅಪರಿಮಿತ ಪವರ್ ವೆಂಚರ್ಸ್ ಪ್ರೈ.ಲಿ 1 ಮೆಗಾವ್ಯಾಟ್ ಸಂಸ್ಥೆಗಳಲ್ಲಿ ಎಂಟಿಬಿ ಪಾಲುದಾರಿಕೆ ಹೊಂದಿದ್ದಾರೆ.

ಯಾವುದೇ ಕ್ರಿಮಿನಲ್ ಪ್ರಕರಣಗಳು ಮತ್ತು ಮೊಕದೊಮೆಗಳು ಇಲ್ಲ, ನ್ಯಾಯಾಲಯದಲ್ಲಿ ಮೂರು ಪ್ರಕರಣಗಳು ಬಾಕಿ ಇವೆ.

ಈ ಹಿಂದೆ 2018 ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​​ನಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 15 ಕೋಟಿ ರೂ. ಎಂದು ಘೋಷಣೆ ಮಾಡಿಕೊಂಡಿದ್ದರು .ತಮ್ಮ ಹೆಸರಿನಲ್ಲಿ ಚರಾಸ್ತಿ 314 ಕೋಟಿ 75 ಲಕ್ಷದ 54 ಸಾವಿರದ 785 ರೂ., ಸ್ಥಿರಾಸ್ತಿ 394 ಕೋಟಿ 63 ಲಕ್ಷ 53 ಸಾವಿರದ 309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27 ಕೋಟಿ 70 ಲಕ್ಷದ 31 ಸಾವಿರದ 565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು.

ತಮ್ಮ ಪತ್ನಿ ಶಾಂತಕುಮಾರಿ ಅವರು ಹೆಸರಿನಲ್ಲಿ 122 ಕೋಟಿ 40 ಲಕ್ಷದ 9 ಸಾವಿರದ 258 ರೂ. ಚರಾಸ್ತಿ, 184 ಕೋಟಿ 1 ಲಕ್ಷದ 12 ಸಾವಿರ ರೂ. ಸ್ಥಿರಾಸ್ತಿ ಹಾಗೂ ಅವರ ವಾರ್ಷಿಕ ಆದಾಯ 52 ಕೋಟಿ ರೂ. ಸೇರಿದಂತೆ 25 ಲಕ್ಷ ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು.

Comments are closed.