ಅಂತರಾಷ್ಟ್ರೀಯ

ಅತಿ ಸಂಸ್ಕರಿತ ಆಹಾರದಿಂದ ಹೃದಯದ ಆರೋಗ್ಯಕ್ಕೆ ಸಮಸ್ಯೆ

Pinterest LinkedIn Tumblr


ವಾಷಿಂಗ್ಟನ್‌: ಬೇಕಾದಾಗ ಸಿಗುತ್ತದೆ, ತೆಗೆದುಕೊಂಡು ಹೋಗಲೂ ಸುಲಭ, ರುಚಿಯಾಗಿರುತ್ತೆ, ಹೀಗೆಲ್ಲ ಕಾರಣಕ್ಕೆ ನಾವಿಂದು ಸಂಸ್ಕರಿತ ಆಹಾರಗಳನ್ನು ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದೇವೆ. ಆದರೆ ಇದರಿಂದ ಹೃದಯದ ಆರೋಗ್ಯಕ್ಕೆ ತೊಂದರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ಬಾರಿ ಅತಿ ಸಂಸ್ಕರಿತ ಆಹಾರ ಸೇವನೆಯಿಂದ ಶೇ.5ರಷ್ಟು ಕ್ಯಾಲರಿ ದೇಹದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಜರ್ನಲ್‌ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳು ಪ್ರಕಟಗೊಂಡಿವೆ.

ವರದಿ ಪ್ರಕಾರ ಅತಿಯಾದ ಸಂಸ್ಕರಿತ ಆಹಾರವನ್ನು ತಿನ್ನುವವರಲ್ಲಿ ಶೇ.70ರಷ್ಟು ಮಂದಿಯ ಹೃದಯದ ಆರೋಗ್ಯ “ಸಾಮಾನ್ಯ’ವಾಗಿರುತ್ತವೆ. ಶೇ.40ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಇಂತಹ ಸಂಸ್ಕರಿತ ಆಹಾರ ತಿನ್ನುವವರ ಆರೋಗ್ಯದ ಮಟ್ಟ ಅದಕ್ಕಿಂತ ಚೆನ್ನಾಗಿರುತ್ತದೆ ಎಂದು ಹೇಳಲಾಗಿದೆ. ಸಂಸ್ಕರಿತ ಆಹಾರ ತಿನ್ನುವುದರಿಂದ ಪ್ರಮುಖವಾಗಿ ಸುಗಮ ರಕ್ತಸಂಚಾರ ವ್ಯವಸ್ಥೆ, ಹೃದಯ ರಕ್ತನಾಳದ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದೆ.

ಪ್ರಮುಖವಾಗಿ ಹೆಚ್ಚುವರಿ ಸಕ್ಕರೆ ಸೇರಿಸಿದ ಆಹಾರಗಳು, ಉಪ್ಪು, ಖಾರ ಇರುವ ರುಚಿಕರ ಚಿಪ್ಸ್‌ಗಳು, ಕುರುಕಲುಗಳು, ಸಂಸ್ಕರಿತ ಆಹಾರಗಳು, ಸಾಫ್ಟ್ ಡ್ರಿಂಕ್ಸ್‌, ಫ್ಯಾಟ್‌ ಇರುವ ಆಹಾರಗಳಿಂದ ಸಮಸ್ಯೆಯಾಗುತ್ತದೆ ಎಂದು ಹೇಳಲಾಗಿದೆ. ಇದರ ಹೊರತಾಗಿ ಜನರು ಆದಷ್ಟು ಪೌಷ್ಟಿಕಾಂಶ ಇರುವ ಹಣ್ಣು, ತರಕಾರಿ, ಕಡಿಮೆ ಪ್ರೊಟೀನ್‌ ಇರುವ ವಸ್ತುಗಳನ್ನು ತಿನ್ನಬೇಕು. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳಿದೆ.

Comments are closed.