ಅಂತರಾಷ್ಟ್ರೀಯ

ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಿಂದ ತರಬೇತಿ

Pinterest LinkedIn Tumblr

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ ‘ಹೀರೋ’ಗಳು. ಒಸಮಾ ಬಿನ್ ಲಾಡೆನ್, ಅಯ್ಮಾನ್ ಅಲ್ ಜವಾಹಿರಿ, ಜಲಾಲುದ್ದೀನ್ ಹಖ್ಖಾನಿ ಮತ್ತಿತರರು ಪಾಕಿಸ್ತಾನದ ‘ಹೀರೋ’ಗಳು ಎಂದೂ ಅವರು ಸಂದರ್ಶನವೊಂದರಲ್ಲಿ ಬಣ್ಣಿಸಿದ್ದಾರೆ.

ಮುಷರಫ್ ಅವರ ಸಂದರ್ಶನದ ವಿಡಿಯೊವನ್ನು ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ಬುಧವಾರ ಟ್ವೀಟ್ ಮಾಡಿದ್ದಾರೆ. ಇದು 2015ರ ಸಂದರ್ಶನದ ಹಳೆ ವಿಡಿಯೊವಾಗಿದೆ.

‘ಪಾಕಿಸ್ತಾನಕ್ಕೆ ಬರುವ ಕಾಶ್ಮೀರಿಗಳಿಗೆ ಇಲ್ಲಿ ‘ಹೀರೋ’ಗಳಿಗೆ ನೀಡುವಂತಹ ಸ್ವಾಗತ ನೀಡಲಾಗುತ್ತಿದೆ. ಅವರಿಗೆ ನಾವು ತರಬೇತಿ ಮತ್ತು ಬೆಂಬಲ ನೀಡುತ್ತೇವೆ. ಅವರನ್ನು ನಾವು ಭಾರತೀಯ ಸೇನೆ ಜತೆ ಸೆಣಸಾಡುವ ಮುಜಾಹಿದೀನ್‌ಗಳೆಂದು ಪರಿಗಣಿಸುತ್ತೇವೆ’ ಎಂದು ಮುಷರಫ್ ಹೇಳಿದ್ದಾರೆ.

Comments are closed.