ಅಂತರಾಷ್ಟ್ರೀಯ

ಮನುಷ್ಯ ಮುಖ ಹೋಲುವ ಈ ಮೀನು ಇಂಟರ್ನೆಟ್ ನಲ್ಲಿ ವೈರಲ್

Pinterest LinkedIn Tumblr

ಚೀನಾದಲ್ಲಿ ಪತ್ತೆಯಾಗಿರುವ ವಿಶಿಷ್ಟ ರೀತಿಯ ಮೀನೊಂದು ಭಾರೀ ಅಚ್ಚರಿಗೆ ಕಾರಣವಾಗಿದೆ. ಈ ಮೀನಿನ ಮುಖ ಥೇಟ್ ಮನುಷ್ಯರನ್ನೇ ಹೋಲುತ್ತಿರುವುದು ವಿಶೇಷ. ಚೀನಾದ ಮಿಯೋ ಎಂಬ ಗ್ರಾಮಕ್ಕೆ ಬಂದಿದ್ದ ಮಹಿಳೆ ಈ ಮೀನನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾಳೆ.

ಚೀನಾದ ವೀಬೋ ಎಂಬ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಆಕೆ ಶೇರ್ ಮಾಡಿದ್ದಳು. ನಂತರ ಇದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಈ ಮೀನಿನ ಮುಖದಲ್ಲಿ ಮನುಷ್ಯರಂತೆ ಎರಡು ಕಣ್ಣು, ಮೂಗು, ಬಾಯಿ ಎಲ್ಲವೂ ಇದೆ. ಮಿಲಿಯನ್ ಗಟ್ಟಲೆ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಚಿತ್ರವಿಚಿತ್ರ ಕಮೆಂಟ್ ಗಳು ಸಹ ಹರಿದಾಡುತ್ತಿವೆ. ಕೆಲವರು ಈ ಮೀನನ್ನು ನೋಡಿ ಅಚ್ಚರಿನ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಇದನ್ನು ತಿನ್ನೋ ಧೈರ್ಯ ಯಾರಿಗಿದೆ ಅಂತಾ ಪ್ರಶ್ನಿಸಿದ್ದಾರೆ.

Comments are closed.