ರಾಷ್ಟ್ರೀಯ

ಕ್ರಿಕೆಟ್ ಸಟ್ಟಾಬಾಜಿ ಹಗರಣ : ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂ ಸಿಸಿಬಿ ಬಲೆ

Pinterest LinkedIn Tumblr

ನವದೆಹಲಿ : ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯಲ್ಲಿ ನಡೆದಿರುವ ಕ್ರಿಕೆಟ್ ಸಟ್ಟಾಬಾಜಿ ಹಗರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕೇಂದ್ರೀಯ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂನನ್ನು ತಮ್ಮ ಬಲೆಗೆ ಕೆಡವಿಕೊಂಡಿದ್ಧಾರೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣಗಳು ಬೆಳಕಿಗೆ ಬರುತ್ತಿದ್ದಂತೆ ಸಯ್ಯಂ ಬಂಧನ ಭೀತಿಯಿಂದ ವೆಸ್ಟ್ ಇಂಡೀಸ್‍ಗೆ ಪರಾರಿಯಾಗಿದ್ದ. ಈತನಿಗಾಗಿ ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್(ಎಲ್‍ಒಎನ್) ಸಹ ಜಾರಿಗೊಳಿಸಿದ್ದರು.

ಸಯ್ಯಂ ನಿನ್ನೆ ರಾತ್ರಿ ವಿದೇಶದಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾನೆ ಎಂಬ ಖಚಿತ ಸುಳಿವಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿದರು. ಹರಿಯಾಣದ ಚಂಡೀಗಡದ ಸಯ್ಯಂ ಅಂತಾರಾಷ್ಟ್ರೀಯ ಬುಕ್ಕಿಯಾಗಿ ಹಲವಾರು ಅಕ್ರಮ ಮತ್ತು ಅವ್ಯವಹಾರಗಳಲ್ಲಿ ತೊಡಗಿದ್ದಾನೆ.

ವಿವಿಧ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು ತಂಡದ ಉನ್ನತಾಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವ ಈತ ಆಟಗಾರರಿಗೆ ಹಣದ ಆಮಿಷವೊಡ್ಡಿ ಅವರನ್ನು ಸಟ್ಟಾಬಾಜಿಯ ಬಲೆಗೆ ಕೆಡವಿಕೊಳ್ಳುವುದರಲ್ಲಿ ನಿಸ್ಸೀಮನಾಗಿದ್ದ ಎಂದು ಸಿಸಿಬಿ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಈತ ಕ್ರಿಕೆಟ್ ಆಟಗಾರರನ್ನು ಓಲೈಸಲು ಸುಂದರ ಯುವತಿಯರು ಮತ್ತು ರೂಪದರ್ಶಿಯ ನೆರವು ಪಡೆಇದ್ದ ಸಂಗತಿಗಳೂ ಸಹ ಬಯಲಾಗಿದೆ. ಹೋಟೆಲ್‍ಗಳಿಗೆ ಆಟಗಾರರನ್ನು ಕರೆಸಿ ಅಲ್ಲಿ ವ್ಯವಹಾರಗಳನ್ನು ಸಯ್ಯಂ ಕುದುರಿಸುತ್ತಿದ್ದ.

ಒಂದು ಒವರ್‍ಗೆ 10 ರನ್‍ಗಳನ್ನು ನೀಡಿದರೆ ಬೌಲರ್‍ಗಳಿಗೆ ತಲಾ ಐದು ಲಕ್ಷ ರೂ.ಗಳ ಕಾಣಿಕೆ ನೀಡುವುದಾಗಿ ಆತನ ಆಮಿಷವೊಡ್ಡಿದ್ದ. ತನ್ನ ಆಣತಿಯಂತೆ ನಡೆದುಕೊಳ್ಳುತ್ತಿದ್ದ ಆಟಗಾರರ ಖಾತೆಗಳಿಗೆ ಹಣವನ್ನು ಸಂದಾಯ ಮಾಡುತ್ತಿದ್ದ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂಧಿದೆ.

ಕೆಪಿಎಲ್ ಹಗರಣದ ಪ್ರಮುಖ ವ್ಯಕ್ತಿ ಭವೇಶ್ ಬಾಪ್ನ ಜೊತೆ ಸಯ್ಯಂ ನಿಕಟ ಸಂಪರ್ಕ ಹೊಂದಿದ್ದ. ಈಗಾಗಲೇ ಸಿಸಿಬಿ ಪೊಲೀಸರು ಬೆಳಗಾವಿ ಫ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ ತಂಡಗಳು ಕೆಲವನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಯ್ಯಂನನ್ನು ಈಗ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ಬುಕ್ಕಿಗಳು ಬಗ್ಗೆ ಮಾಹಿತಿ ಲಭಿಸುವ ಸಾಧ್ಯತೆ ಇದೆ.

Comments are closed.