ಅಂತರಾಷ್ಟ್ರೀಯ

ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಹತ್ಯೆಯ ವಿಡಿಯೋ ಬಿಡುಗಡೆ: ಡೊನಾಲ್ಡ್​ ಟ್ರಂಪ್

Pinterest LinkedIn Tumblr


ವಾಷಿಂಗ್ಟನ್: ಐಸಿಸ್​ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಅಮೆರಿಕ ನಡೆಸಿದ ದಾಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತ. ನೇರ ಪ್ರಸಾರದಲ್ಲಿ ಬಾಗ್ದಾದಿ ಸಾವನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾನುವಾರ ಹೇಳಿದ್ದರು. ಇದೀಗ ಬಾಗ್ದಾದಿ ಸಾವಿನ ನೇರ ಪ್ರಸಾರದ ವಿಡಿಯೋದ ಕೆಲವು ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.

ವೈಟ್​​ಹೌಸ್​​ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್, ಜಗತ್ತಿನ ಕ್ರೂರ ಉಗ್ರ ಸಂಘಟನೆಯ ನಾಯಕನನ್ನು ಜೀವಂತ ಸೆರೆಹಿಡಿಯಲು ಸಾಕಷ್ಟು ಪ್ರಯತ್ನ ನಡೆಸಿದೆವು. ಅದು ಸಾಧ್ಯವಾಗಲಿಲ್ಲ. ಸೂಸೈಡ್​ ಬಾಂಬ್ ಜಾಕೆಟ್​​ ಧರಿಸಿದ್ದ ಆತ, ತನ್ನನ್ನು ತಾನೇ ಸ್ಫೋಟಿಸಿಕೊಂಡ. ನೇರ ದೃಶ್ಯಾವಳಿಗಳ ಕೆಲವು ಭಾಗಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಬಾಗ್ದಾದಿ ಸಾವನ್ನು ಶನಿವಾರ ಖಚಿತಪಡಿಸಿದ್ದ ಟ್ರಂಪ್, ಕಾರ್ಯಾಚರಣೆಯ ನೇರ ದೃಶ್ಯಾವಳಿಗಳು ಸಿನಿಮಾ ನೋಡಿದಂತತೆ ಭಾಸವಾಗುತ್ತಿತ್ತು. ದೃಶ್ಯಾವಳಿಗಳ ಗುಣಮಟ್ಟ ಅತ್ಯುತ್ತಮವಾಗಿತ್ತು ಎಂದು ಹೇಳಿದ್ದರು.
ಡೆಮಾಕ್ರಟಿಕ್ ಪಕ್ಷ ಹೌಸ್​ ಆಫ್ ರೆಪ್ರಸೆಂಟಟೀವ್ಸ್​​ನಲ್ಲಿ ಟ್ರಂಪ್ ವಿರುದ್ಧ ದೋಷಾರೋಪಣೆ ಹೋರಿಸಲು ಮುಂದಾಗಿರುವ ಹೊತ್ತಲ್ಲಿ ಬಾಗ್ದಾದಿ ಸಾವು ಟ್ರಂಪ್​ಗೆ ಪ್ರಮುಖ ರಾಜಕೀಯ ಜಯವಾಗಿದೆ. ಅಮೆರಿಕ ಅಧ್ಯಕ್ಷ ಪಟ್ಟಕ್ಕೆ ಮತ್ತೊಮ್ಮೆ ಪೈಪೋಟಿ ನಡೆಸಲು ಇಚ್ಚಿಸಿದ್ದು, ಇದು ತಕ್ಕಮಟ್ಟಿಗೆ ವರವಾಗಲಿದೆ ಎನ್ನಲಾಗುತ್ತಿದೆ.

Comments are closed.