ಅಂತರಾಷ್ಟ್ರೀಯ

ವೈದ್ಯನ ನಿರ್ಲಕ್ಷ್ಯ: 900 ಮಕ್ಕಳಿಗೆ ಎಚ್‌ಐವಿ ಸೋಂಕು

Pinterest LinkedIn Tumblr

ಪಾಕಿಸ್ತಾನದಲ್ಲಿ 900 ಮಕ್ಕಳು ಎಚ್‌ಐವಿ ಪೀಡಿತರಾಗಿರುವುದು ಕಂಡು ಬಂದಿದೆ. ಇಲ್ಲಿನ ವೈದ್ಯನೊಬ್ಬನ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ಬಡ ರೋಗಿಗಳಿಗೆ ಒಂದೇ ಸಿರಿಂಜಿನಲ್ಲಿ ಇಂಜಕ್ಷನ್ ನೀಡುತ್ತಿದ್ದ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಫರ್ ಎಂಬ ವೈದ್ಯನನ್ನು ಬಂಧಿಸಲಾಗಿದೆ. ಆರೋಪಿ ವೈದ್ಯ ತಾನು ನಿರಪರಾಧಿ ಎನ್ನುತ್ತಿದ್ದಾನೆ. ಆದ್ರೆ ಕೋಪಗೊಂಡ ರೋಗಿಗಳ ಪಾಲಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.

ಇಮ್ತಿಯಾಜ್ ಜಿಲಾನಿಯ ಆರು ಮಕ್ಕಳಿಗೆ ಈ ವೈದ್ಯ ಚಿಕಿತ್ಸೆ ನೀಡಿದ್ದ. ಕಸದ ತೊಟ್ಟಿಯಿಂದ ಸೂಜಿಯನ್ನು ತೆಗೆದುಕೊಂಡು ಆರು ವರ್ಷದ ಮಗುವಿಗೆ ಚುಚ್ಚುಮದ್ದು ನೀಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ರೆ ಹೊಸ ಸೂಜಿಗೆ ನಿನ್ನ ಬಳಿ ಹಣ ಇದೆಯ ಎಂದು ಆತ ಕೇಳಿದ್ದನಂತೆ.

ಇಮ್ತಿಯಾಜ್ ನ ಇಬ್ಬರು ಮಕ್ಕಳು ಈಗಾಗಲೇ ಸಾವನ್ನಪ್ಪಿದ್ದಾರಂತೆ. ಉಳಿದ ಮಕ್ಕಳು ಹೆಚ್ ಐ ವಿ ಯಿಂದ ಬಳಲುತ್ತಿದ್ದಾರಂತೆ. ವೈದ್ಯಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.