ರಾಷ್ಟ್ರೀಯ

ಮಹಿಳೆಯರ ರಕ್ಷಣೆಗಾಗಿ 13000 ಮಾರ್ಷಲ್‌ಗಳ ನಿಯೋಜನೆ

Pinterest LinkedIn Tumblr

ನವದೆಹಲಿ : ದೆಹಲಿಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಮಂಗಳವಾರದಿಂದ 13000 ಮಾರ್ಷಲ್‌ಗಳನ್ನು ನಿಯೋಜಿಸ ಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ತಿಳಿಸಿದ್ದಾರೆ.

ಹೊಸದಾಗಿ ನೇಮಕಾತಿಯಾಗಿರುವ ಮಾರ್ಷಲ್‌ಗಳ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ರಾಜಧಾನಿಯಲ್ಲಿ ನಮ್ಮ ಸರ್ಕಾರ ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡಿದೆ, ಲೈಂಗಿಕ ಕಿರುಕುಳದಂತಹ ಘಟನೆಗಳನ್ನು ತಡೆಯಲು ಸಾರಿಗೆ ಬಸ್ಸುಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಿದರು. ಈಗಾಗಲೇ 3400 ಮಾರ್ಷಲ್‌ಗಳು ಕೆಲಸ ಮಾಡುತ್ತಿದ್ದಾರೆ. ಮಂಗಳವಾರದಿಂದ ಹೊಸದಾಗಿ 9600 ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಕೇಜ್ರಿವಾಲ್‌ ಮಾಹಿತಿ ನೀಡಿದರು.

ಇತ್ತೀಚೆಗೆ 104 ಹೊಸ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದ್ದ ಅವರು ಈ ಬಸ್ಸುಗಳಲ್ಲಿ ಸಿಸಿಕ್ಯಾಮೆರಾ, ಮಹಿಳೆಯರ ರಕ್ಷಣೆಗಾಗಿ ಫ್ಯಾನಿಕ್‌ ಬಟನ್‌ ಅಳವಡಿಸಲಾಗಿದೆ. ಅಂಗವಿಕಲರಿಗಾಗಿ ಹೈಡ್ರಾಲಿಕ್‌ ಲಿಫ್ಟ್‌ ವ್ಯವಸ್ಥೆ ಈ ಬಸ್ಸಿನಲ್ಲಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

Comments are closed.