ಅಂತರಾಷ್ಟ್ರೀಯ

ಬ್ರೆಜಿಲ್ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ವೀಸಾ ಅಗತ್ಯವಿಲ್ಲ

Pinterest LinkedIn Tumblr

ಸಾವೋ ಪಾಲೋ: ಪ್ರಮುಖ ಬೆಳವಣಿಗೆಯೊಂದರಲ್ಲಿ ಇನ್ನು ಮುಂದೆ ಬ್ರೆಜಿಲ್ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂಬ ನಿರ್ಧಾರವನ್ನು ಅಲ್ಲಿನ ಸರ್ಕಾರ ಘೋಷಿಸಿದೆ.ಬ್ರೆಜಿಲ್‍ಗೆ ಬೇಟಿ ನೀಡಲಿರುವ ಭಾರತ ಮತ್ತು ಚೀನಿ ಪ್ರವಾಸಿಗರಿಗೆ ವೀಸಾ ಅಗತ್ಯವನ್ನು ನಮ್ಮ ಸರ್ಕಾರ ಕೈಬಿಟ್ಟಿದೆ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನ್ಯಾರೋ ಹೇಳಿದ್ದಾರೆ.

ಬ್ರೆಜಿಲ್‍ನ ಮೆಗಾಸಿಟಿ ಸಾವೋ ಪಾಲೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ರೆಜಿಲ್‍ಗೆ ಭೇಟಿ ನೀಡುವ ಭಾರತೀಯರು ಮತ್ತು ಚೀನಿಯರಿಗೆ ಇನ್ನು ಮುಂದೆ ವೀಸಾ ಅಗತ್ಯವಿಲ್ಲ ಎಂದು ಹೇಳಿದರು. ಈ ಹೊಸ ನೀತಿಯಿಂದ ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಬ್ರೆಜಿಲ್ ಅಧ್ಯಕ್ಷರು ಮುಂದಾಗಿದ್ದಾರೆ.

ಈ ವರ್ಷದಲ್ಲಿ ಬೆಜ್ರಿಲ್ ರಾಷ್ಟ್ರಾಧ್ಯಕ್ಷರಾದ ಬಲಪಂಥೀಯ ನಾಯಕರಾದ ಜೈರ್, ಅಭಿವೃದ್ದಿ ಹೊಂದಿದ ದೇಶಗಳಿಗೆ ವೀಸಾ ಅಗತ್ಯತೆಯ ನಿಯಮಗಳಲ್ಲಿ ಸಡಲಿಕೆ ಮಾಡುವ ಹೊಸ ನೀತಿಯೊಂದನ್ನು ಪ್ರಕಟಿಸಿದ್ದಾರೆ. ಈ ಹಿಂದೆ ಅವರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಪ್ರವಾಸಿಗರಿಗೆ ವೀಸಾ ಅಗತ್ಯವನ್ನು ರದ್ದುಗೊಳಿಸಿದ್ದರು.

ಏಷ್ಯಾದ ಎರಡು ಪ್ರಬಲ ದೇಶಗಳಾದ ಭಾರತ ಮತ್ತು ಚೀನಾದೊಂದಿಗೆ ಸ್ನೇಹ ಹಸ್ತ ಬಯಸಿರುವ ಅವರು ಇನ್ನು ಕೆಲವು ವಿದೇಶಿ ನೀತಿಗಳನ್ನು ಸಡಿಲಗೊಳಿಸುವ ನಿರೀಕ್ಷೆ ಇದ್ದು, ಏಷ್ಯಾ ಉಪಖಂಡದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶ ಹೊಂದಿದ್ದಾರೆ.

Comments are closed.