ಅಂತರಾಷ್ಟ್ರೀಯ

ಪಾಪ್ ಸಿಂಗರ್ ಮತ್ತು ನಟಿ ಸುಲ್ಲಿಯ ಮೃತದೇಹ ಪತ್ತೆ

Pinterest LinkedIn Tumblr

ಲಾಸ್ ಎಂಜಲ್ಸ್: ಕೊರಿಯನ್ ಪಾಪ್ ಸಿಂಗರ್ ಮತ್ತು ನಟಿ 25 ವರ್ಷದ ಸುಲ್ಲಿ ಮೃತದೇಹ ಪತ್ತೆಯಾಗಿದೆ.

ಸಿಯೋಲ್ನಲ್ಲಿರುವ ಆಕೆಯ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡ ಸುಲ್ಲಿ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸುಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ತನಿಖೆ ಕೈಗೊಂಡಿರುವ ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪತ್ತೆ ಹಚ್ಚಬೇಕಿದೆ.

2005ರಲ್ಲಿ ಸುಲ್ಲಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 2017ರಲ್ಲಿ ರಿಯಲ್ ಮತ್ತು ಪೈರಟ್ಸ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

Comments are closed.