ಅಂತರಾಷ್ಟ್ರೀಯ

ಅಬೀ ಅಹ್ಮದ್ ಅಲಿ ಅವರಿಗೆ ಒಲಿದ ನೋಬೆಲ್ ಶಾಂತಿ ಪುರಸ್ಕಾರ

Pinterest LinkedIn Tumblr

ಸ್ಟಾಕ್ ಹೋಂ : ಇಥಿಯೋಪಿಯಾದ ಪ್ರಧಾನ ಮಂತ್ರಿ ಅಬೀ ಅಹ್ಮದ್ ಅಲಿ ಅವರಿಗೆ ಈ ವರ್ಷದ ನೋಬೆಲ್ ಶಾಂತಿ ಪುರಸ್ಕಾರ ಒಲಿದಿದೆ. ಇಥಿಯೋಪಿಯಾದ ನೆರೆಯ ದೇಶ ಹಾಗೂ ಬದ್ಧ ವೈರಿ ಎರಿಟ್ರಿಯಾ ಜತೆಗಿನ 20 ವರ್ಷಗಳ ಸಂಘರ್ಷವನ್ನು ಪರಿಹರಿಸಲು ಅವರು ಪಟ್ಟ ಪ್ರಯತ್ನಗಳನ್ನು ಗುರುತಿಸಿ ಅವರನ್ನು ಈ ಅತ್ಯುನ್ನತ ಪ್ರಶಸ್ತಿಗಾಗಿ ಆರಿಸಲಾಗಿದೆ ಎಂದು ನೋಬೆಲ್ ಪ್ರಶಸ್ತಿ ಸಮಿತಿ ತಿಳಿಸಿದೆ.

ಶಾಂತಿ ಹಾಗೂ ಅಂತರಾಷ್ಟ್ರೀಯ ಸಹಕಾರಕ್ಕೆ, ಮುಖ್ಯವಾಗಿ ನೆರೆಯ ದೇಶ ಎರಿಟ್ರಿಯಾ ಜತೆಗಿನ ಗಡಿ ಸಮಸ್ಯೆಯನ್ನು ಪರಿಹರಿಸಲು ಅವರು ಕೈಗೊಂಡ ನಿರ್ಣಾಯಕ ಕ್ರಮಗಳನ್ನುಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನೋಬಲ್ ಸಮಿತಿ ಹೇಳಿದೆ.

Comments are closed.