ಅಂತರಾಷ್ಟ್ರೀಯ

ಅತ್ಯಾಚಾರ ಆರೋಪ: ನೇಪಾಳ ಸ್ಪೀಕರ್ ರಾಜೀನಾಮೆ

Pinterest LinkedIn Tumblr


ನವದೆಹಲಿ(ಅ.01): ಅತ್ಯಾಚಾರ ಆರೋಪ ಎದುರಿಸುತ್ತಿರುವ ನೇಪಾಳ ಸ್ಪೀಕರ್ ಕೃಷ್ಣ ಬಹದೂರ್ ಮಹರಾ ತಮ್ಮ ಸ್ಥಾನಕ್ಕೆ ​ರಾಜೀನಾಮೆ ನೀಡಿದ್ದಾರೆ. ಫೆಡರಲ್ ಪಾರ್ಲಿಮೆಂಟ್ ಸೆಕ್ರೆಟರಿಯಟ್​​ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ತಮ್ಮ ಮೇಲೆ ನೇಪಾಳ ಸಂಸತ್ತಿನ ಸ್ಪೀಕರ್ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸ್ಪೀಕರ್ ಕೃಷ್ಣ ಬಹದೂರ್ ಮಹರಾ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ಹಿಂದೆ ಹಮ್ರೋ ಕುರಾ ಆನ್​​ಲೈನ್ ಎಂಬ ನ್ಯೂಸ್ ಪೋರ್ಟಲ್​​ನಲ್ಲಿ ಸಂತ್ರಸ್ತೆ ಮಹಿಳೆ ವಿಡಿಯೋ ಬಿಡುಗಡೆ ಮಾಡಿದ್ದರು. “ನನಗೆ ಸ್ಪೀಕರ್​​ ಸುಮಾರು ವರ್ಷಗಳಿಂದ ಗೊತ್ತು. ಹಲವು ಬಾರಿ ನನ್ನ ಜೊತೆಗೆ ಅಸಭ್ಯವಾಗಿಯೂ ವರ್ತಿಸಿದ್ದಾರೆ. ನಾನು ಎಷ್ಟು ಬಾರಿ ಹೇಳಿದರೂ ಕೇಳಲಿಲ್ಲ” ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

“ನಾನು ಇದೇ ಸೆಪ್ಟೆಂಬರ್​​ 23ನೇ ತಾರೀಕು ನನ್ನ ಮನೆಯಲ್ಲಿದೆ. ಈ ವೇಳೆ ಸ್ಪೀಕರ್​ ದಿಢೀರ್​​ ಮನೆಗೆ ಬಂದರು. ಬಳಿಕ ಏಕಾಏಕಿ ನನ್ನ ಮೇಲೆ ಅತ್ಯಾಚಾರ ಎಸಗಿದರು. ನಾನು ಎಷ್ಟೇ ಕೇಳಿಕೊಂಡರೂ ಬಿಡಲಿಲ್ಲ. ಬದಲಿಗೆ ನಿಂದಿಸಿ ಮಾನಸಿಕವಾಗಿ ಹಿಂಸಿಸಿದರು” ಎಂದು ಆರೋಪಿಸಿದ್ದಾರೆ.

ಇನ್ನು ಮಹಿಳೆ ಆರೋಪನ್ನು ಸ್ಪೀಕರ್ ನಿರಾಕರಿಸಿದ್ದರು. ಅಲ್ಲದೇ ಈ ಬಗ್ಗೆ ತನಿಖೆ ನಡೆಯಲಿ. ನನಗೆ ಈ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂದು ಗೊತ್ತಿದೆ. ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ನಾನು, ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಸ್ಪೀಕರ್ ಕೃಷ್ಣ ಬಹದೂರ್ ಮಹರಾ ಉಪ ಸ್ಪೀಕರ್ ಶಿವಮಯ ತುಂಬಹಂಫೆಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ನೇಪಾಳ ಪೊಲೀಸರು ಸ್ಪೀಕರ್​​ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ. ಇನ್ನೇನು ತನಿಖೆ ನಡೆಸಬೇಕೆನ್ನುವ ಹೊತ್ತಲೇ ಸ್ಪೀಕರ್ ಕೃಷ್ಣ ಬಹದೂರ್ ಮಹರಾ ರಾಜೀನಾಮೆ ನೀಡಿರುವುದು ಚರ್ಚಾ ಕೇಂದ್ರವಾಗಿದೆ.

Comments are closed.