ಅಂತರಾಷ್ಟ್ರೀಯ

ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ ತಿಕಿರಿ ಆನೆ ಸಾವು ! 1 ತಿಂಗಳ ನರಳಾಟ ಅಂತ್ಯ!

Pinterest LinkedIn Tumblr

ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ ತಿಕಿರಿ ಆನೆ ನೋಡುಗರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತ್ತು. ನರಳುತ್ತಾ ನರಳುತ್ತಲೇ ತಿಕಿರಿ ಆನೆ ಇಹಲೋಕ ತ್ಯಜಿಸಿದೆ.

ಪ್ರತಿ ವರ್ಷ ಶ್ರೀಲಂಕಾದಲ್ಲಿ ನಡೆಸುವ ಬೌದ್ಧ ಹಬ್ಬವಾದ ಪೆರೆಹಾರ ಉತ್ಸವದಲ್ಲಿ ತಿಕಿರಿ ಆನೆಯನ್ನು ಬಳಸಲಾಗಿತ್ತು. ತಿಕಿರಿ ಆನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರಿಯಕರ ಕರುಳು ಚುರುಕ್ ಅನ್ನುವಂತೆ ಮಾಡಿತ್ತು.

ಪೆರೆಹಾರ ಮೆರವಣೆಗೆಯ ವೇಳೆ ತಿಕಿರಿ ಆನೆ ಕುಸಿದು ಬಿದ್ದಿದ್ದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಒಂದು ತಿಂಗಳ ಕಾಲ ನರಳಿದ್ದ ತಿಕಿರಿ ಆನೆ ಮೃತಪಟ್ಟಿದೆ.

Comments are closed.