ಅಂತರಾಷ್ಟ್ರೀಯ

ಅಲ್‌ ಕೈದಾ ಉಗ್ರ ಸಂಘಟನೆ ಸೇರಿದಂತೆ ಇತರೆ ಉಗ್ರಗಾಮಿ ಗುಂಪುಗಳಿಗೆ ಪಾಕ್‌ ಸೇನೆಯಿಂದಲೇ ತರಬೇತಿ: ಭಯಾನಕ ಸತ್ಯ ಸ್ಫೋಟಿಸಿದ ಇಮ್ರಾನ್‌

Pinterest LinkedIn Tumblr

ವಾಷಿಗ್ಟನ್‌: ಅಮೆರಿಕದ 9/11 ದಾಳಿ ಕುಖ್ಯಾತಿಯ ಅಲ್‌ ಕೈದಾ ಉಗ್ರ ಸಂಘಟನೆ ಸೇರಿದಂತೆ ಇತರೆ ಉಗ್ರಗಾಮಿ ಗುಂಪುಗಳಿಗೆ ಪಾಕಿಸ್ತಾನ ಸೇನೆ ಮತ್ತು ಇಂಟರ್‌ ಸರ್ವೀಸ್‌ ಇಂಟಲಿಜೆನ್ಸ್‌ (ಐಎಸ್‌ಐ) ನಿಂದಲೇ ತರಬೇತಿ ನೀಡಲಾಗುತ್ತಿದೆ. ಸ್ವತಃ ಪಾಕ್‌ ಪ್ರಧಾನಿ ಇಮ್ರಾನ್ ಖಾನ್‌ ಅವರಿಂದಲೇ ಈ ಭಯಾನಕ ಸತ್ಯ ಸ್ಫೋಟಗೊಂಡಿದೆ.

ಅಫ್ಘಾನಿಸ್ತಾನದಲ್ಲಿರುವ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಪಾಕ್‌ ಸೇನೆಯೇ ತರಬೇತುಗೊಳಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ಒಂದು ದೇಶದ ಪ್ರಧಾನಿಯೇ ನಮ್ಮ ದೇಶದಿಂದ ಉಗ್ರ ಸಂಘಟನೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಪ್ಪೊಪ್ಪಿಕೊಂಡಿರುವುದು ಇದೇ ಮೊದಲು. ನ್ಯೂಯಾರ್ಕ್‌ನ ವಿದೇಶಾಂಗ ವ್ಯವಹಾರಗಳ ಕೇಂದ್ರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಸತ್ಯ ಬಿಚ್ಚಿಟ್ಟಿದ್ದಾರೆ.

ಇಮ್ರಾನ್ ಖಾನ್‌ ಅಲ್‌ ಕೈದಾ ಕುರಿತಂತೆ ಹಲವು ಸ್ವಾರಸ್ಯಕರ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್‌ ಖೈದಾವನ್ನು ಅಫ್ಘಾನಿಸ್ತಾನದಲ್ಲಿದ್ದ ಸೋವಿಯತ್‌ ಪಡೆಗಳ ವಿರುದ್ಧ ಹೋರಾಡಲು ಹುಟ್ಟುಹಾಕಿದ್ದು ಎಂದು ಹೇಳಲಾಗಿದೆ. ಆದರೆ, ವಾಸ್ತವದಲ್ಲಿ ಸೋವಿಯತ್‌ ಪಡೆಗಳು ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿದ ನಂತರ ಅಲ್‌ ಕೈದಾ ರೂಪು ತಳೆದಿದೆ.

ಅಲ್‌ ಕೈದಾವನ್ನು ಪಾಕಿಸ್ತಾನದ ಪೆಷಾವರದಲ್ಲಲಿ 1988ರ ಆಗಸ್ಟ್‌ 11ರಂದು ಒಸಾಮಾ ಬಿನ್ ಲಾಡೆನ್‌ ಹುಟ್ಟುಹಾಕಿದರು. ಆದರೆ ರಷ್ಯಾ ಪಡೆಗಳು 1988ರ ಮೇ 15ರಿಂದಲೇ ರಷ್ಯಾ ಪಡೆಗಳು ಅಫ್ಘಾನಿಸ್ತಾನವನ್ನ ತೊರೆಯಲು ಆರಂಭಿಸಿದ್ದವು. 1989ರ ಫೆಬ್ರವರಿ ವೇಳೆಗೆ ರಷ್ಯಾಪಡೆ ಅಫ್ಘಾನಿಸ್ತಾನ ನೆಲದಿಂದ ಪೂರ್ಣವಾಗಿ ಖಾಲಿಮಾಡಿತ್ತು. ಇದಾದ ನಂತರವೂ ಪಾಕಿಸ್ತಾನ ಸೇನೆ ಅಲ್‌ ಕೈದಾ ಉಗ್ರ ಸಂಘಟನೆಯೊಮದಿಗೆ ನಿರಂತರ ಸಂಪರ್ಕ ಹೊಂದಿತ್ತು ಎಂದು ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ಉಗ್ರರ ತವರೂರು ಎನ್ನುವುದನ್ನು ಸ್ವತಃ ಪ್ರಧಾನಿ ಇಮ್ರಾನ್‌ ಖಾನ್‌ ಅವರೇ ಒಪ್ಪಿಕೊಂಡಿದ್ದರು. ದೇಶದಲ್ಲಿ 40ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದ್ದವು, ಈಗಲೂ 30ರಿಂದ 40 ಸಾವಿರ ಉಗ್ರರು ದೇಶದಲ್ಲಿದ್ದಾರೆ ಎಂದು ಅವರೇ ಹೇಳಿದ್ದಾರೆ.

Comments are closed.