ಕ್ರೀಡೆ

ನಿಷೇಧದ ಭೀತಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ! ಅಷ್ಟಕ್ಕು ನಡೆದಿರುವುದೇನು?

Pinterest LinkedIn Tumblr

ಬೆಂಗಳೂರು: ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕರ ಪೈಕಿ ಎಂ ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಪ್ರಮುಖರು. ಧೋನಿ ಕೂಲ್ ಕ್ಯಾಪ್ಟನ್ ಎಂದೇ ಬಿರುದು ಪಡೆದುಕೊಂಡ ನಾಯಕತ್ವದಿಂದ ಕೆಳಗಿಳಿದರು. ಸದ್ಯ ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕೊಹ್ಲಿ ನಾಯಕತ್ವ ಟೀಂ ಇಂಡಿಯಾ ಕಂಡ ಎಲ್ಲಾ ನಾಯಕರಿಗಿಂತ ವಿಭಿನ್ನ. ಮೈದಾನದಲ್ಲಿ ಹೆಚ್ಚಾಗಿ ಸಿಡಿಮಿಡಿಗೊಳ್ಳುತ್ತಿರುವ ಕೊಹ್ಲಿ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವುದಿಲ್ಲ.

ಭಾವೋದ್ವೇಗಕ್ಕೊಳಗಾಗಿ ಎದುರಾಳಿಗರ ಮೇಲೆ ಅಥವಾ ತಮ್ಮದೇ ತಂಡದ ಆಟಗಾರರ ಮೇಲೆ ವಿರಾಟ್ ವಿರಾಟ ಪ್ರದರ್ಶನ ತೋರುತ್ತಾರೆ. ಆದರೆ, ಸದ್ಯ ಕೊಹ್ಲಿಗೆ ತನ್ನ ಕೋಪವೆ ಮುಳುವಾಗಿದೆ. ಅದು ಕ್ರಿಕೆಟ್​ನಿಂದ ನಿಷೇಧ ಆಗುವವರೆಗೆ!

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ-20 ಕದನದಲ್ಲಿ ಕೊಹ್ಲಿ ಅಶಿಸ್ತನಿಂದ ಅವರ್ತಿಸಿದ ಪರಿಣಾಮ ಐಸಿಸಿ ಒಂದು ಋಣಾತ್ಮಕ ಅಂಕ ಕೊಟ್ಟು ಎಚ್ಚರಿಕೆ ನೀಡಿದೆ.

ದ. ಆಫ್ರಿಕಾ ಆಟಗಾರ ಬ್ಯೂರನ್ ಹೆಂಡ್ರಿಕ್ಸ್ ಅವರಿಗೆ ಕೊಹ್ಲಿ ಭುಜ ತಾಗಿಸಿ ಐಸಿಸಿ ನಿಯಮ ಉಲ್ಲಂಘಸಿದ್ದರು. ಐಸಿಸಿ ನಿಯಮದ ಆರ್ಟಿಕಲ್ 2.12 ಪ್ರಕಾರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಎದುರಾಳಿ ಆಟಗಾರ, ಅಂಪೈರ್ ಅಥವಾ ಮ್ಯಾಚ್ ರೆಫ್ರಿಯನ್ನು ಅನಗತ್ಯವಾಗಿ ಪ್ರಚೋದನಕಾರಿ ರೀತಿಯಲ್ಲಿ ಮುಟ್ಟುವುದು ಅಪರಾಧ ಎಂದು ಹೇಳಿದೆ.

2016ರಲ್ಲಿ ಐಸಿಸಿ ಈ ಹೊಸ ನಿಯಮ ಜಾರಿಗೆ ತಂದ ಬಳಿಕ ಕೊಹ್ಲಿ ಮೂರನೇ ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಹಿಂದೆ 2018 ಜನವರಿಯಲ್ಲಿ ಇದೇ ದ. ಆಫ್ರಿಕಾ ವಿರುದ್ಧ ಕೊಹ್ಲಿ ನಿಯಮ ಉಲ್ಲಂಘಿಸಿ 1 ಡೀಮೆರಿಟ್ ಅಂಕಕ್ಕೆ ಗುರಿಯಾಗಿದ್ದರು.

ಅಲ್ಲದೆ ಕಳೆದ ವರ್ಷ ಜೂನ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಔಟ್​ಗಾಗಿ ಅಂಪೈರ್​ ಮುಂದೆ ಜೋರು ಮೊರೆಯಿಟ್ಟ ಪರಿಣಾಮ ಕೊಹ್ಲಿಗೆ ಪಂದ್ಯದ ಗಳಿಕೆಯ ಶೆ. 25 ರಷ್ಟು ದಂಡ ವಿಧಿಸುವ ಜೊತೆಗೆ ಒಂದು ಋಣಾತ್ಮಕ ಅಂಕ ಪಡೆದಿದ್ದರು.

ಇವೆಲ್ಲಾ ಸೇರಿ ಕೊಹ್ಲಿ ಖಾತೆಯಲ್ಲಿ ಈಗ ಒಟ್ಟು ಮೂರು ಡೀಮೆರಿಟ್ ಅಂಕವಿದೆ. ಇಂದುವೇಳೆ ಇದೇ ರೀತಿ 24 ತಿಂಗಳಲ್ಲಿ ಒಬ್ಬ ಆಟಗಾರ 4 ಅಥವಾ ನಾಲ್ಕಕ್ಕಿಂತ ಅಧಿಕಬಾರಿ ಋಣಾತ್ಮಕ ಅಂಕ ಪಡೆದರೆ, ಆ ಆಟಗಾರನನ್ನು ಕ್ರಿಕೆಟ್ ಆಡದಂತೆ ನಿಷೇಧ ಹೇರುವ ನಿಯಮವಿದೆ.

ಹೀಗಾಗಿ ಕೊಹ್ಲಿ ಮುಂದಿನ ಪಂದ್ಯಗಳಲ್ಲಿ ಕೇವಲ ಒಂದು ತಪ್ಪು ಮಾಡಿದರೆ ಬಾರಿ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮೈದಾನದಲ್ಲಿ ಕೊಹ್ಲಿ ವರ್ತನೆ ಅನುಚಿತವಾಗಿ ಮರುಕಳಿಸಿದರೆ ಕ್ರಿಕೆಟ್​ನಿಂದಲೇ ನಿಷೇಧ ಅನುಭವಿಸಬೇಕಾಗಿ ಬರಲಿದೆ.

Comments are closed.