
ಮ್ಯಾಂಚೆಸ್ಟರ್: ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ 22 ವರ್ಷದ ವ್ಯಕ್ತಿಯೋರ್ವ ತನ್ನ 11 ತಿಂಗಳ ಮಗುವನ್ನು ನದಿಗೆ ಎಸೆದು ಮದ್ಯ ಸೇವಿಸಲು ಪಬ್ ಕಡೆ ತೆರಳಿದ್ದಕ್ಕಾಗಿ ಪೊಲೀಸರು ಬಂಧಿಸಿರುವ ಘಟನೆ ಗ್ರೇಟರ್ ಮ್ಯಾಂಚೆಸ್ಟರ್ನಲ್ಲಿ ನಡೆದಿದೆ.
ಪ್ರತ್ಯಕ್ಷದರ್ಶಿ ಹೇಳುವಂತೆ ಸಂಜೆ 4.30ರ ಸುಮಾರಿಗೆ ವ್ಯಕ್ತಿಯೊಬ್ಬ ಬ್ರಿಜ್ ಮೇಲಿಂದ 11 ತಿಂಗಳ ಗಂಡು ಮಗುವನ್ನು ನದಿಗೆ ಎಸೆಯುತ್ತಾನೆ. ಕೂಡಲೇ ಮಗುವನ್ನು ರಕ್ಷಿಸಲಾಯಿತಾದರೂ ಕೆಲವೇ ಕ್ಷಣಗಳಲ್ಲಿ ಆ ಮಗು ಮೃತಪಟ್ಟಿದೆ.
ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದ ವ್ಯಕ್ತಿಯು ಮಗುವನ್ನು ತಂದು ನದಿಗೆ ಎಸೆದಿದ್ದಾನೆ. ಬಳಿಕ ಪಬ್ಗೆ ತೆರಳಿ ಕುಡಿಯಲು ಮದ್ಯವನ್ನು ಕೇಳಿದ್ದಾನೆ. ಆದರೆ ಆತನ ಬಳಿ ಹಣವಿರಲಿಲ್ಲ. ಬಳಿಕ ಹಲವಾರು ಜನರು ಪಬ್ ಬಳಿ ಜಮಾಯಿಸಿ ನದಿಯಲ್ಲಿ ಮಗು ಬಿದ್ದಿದೆ ಎಂದು ಚೀರುತ್ತಾರೆ. ಆಗ ತಾನೆ ಮಗುವನ್ನು ನದಿಗೆ ಎಸೆದಿದ್ದಾಗಿ ಗ್ರಾಹಕರೊಬ್ಬರಿಗೆ ಆರೋಪಿ ತಿಳಿಸುತ್ತಾನೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿ ಆರೋಪಿ ಪಬ್ನಲ್ಲಿಯೇ ಕುಳಿತಿದ್ದಾನೆ ಎಂದು ಹೇಳಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
Comments are closed.