ಕ್ರೀಡೆ

ಧೋನಿ ನಿವೃತ್ತಿ ಕುರಿತು ಸಾಕ್ಷಿ ಹೇಳಿದ್ದೇನು?

Pinterest LinkedIn Tumblr


ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ಎಂ ಎಸ್‌ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಚರ್ಚೆಗೆ ಇದೀಗ ಧೋನಿ ಪತ್ನಿ ಸಾಕ್ಷಿ ಧೋನಿ ತೆರೆ ಎಳೆದಿದ್ದಾರೆ.

ಎಂ ಎಸ್‌ ಧೋನಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ನಿವೃತ್ತಿಯಾಗುವ ಕುರಿತು ಘೋಷಿಸಲಿದ್ದಾರೆ ಎಂದು ಸುದ್ದಿಯಾಗಿದ್ದಕ್ಕೆ ಮೌನ ಮುರಿದಿರುವ ಸಾಕ್ಷಿ ಧೋನಿ, ಟ್ವೀಟ್‌ ಮಾಡಿ ಇದನ್ನು ವದಂತಿ ಎಂದು ಕರೆಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಟೀಂ ಇಂಡಿಯಾ ನಾಯಕ ಕೊಹ್ಲಿ ಟ್ವೀಟ್‌ ಮಾಡಿ 2016ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಲೀಗ್​ ಪಂದ್ಯದ ಫೋಟೊವೊಂದನ್ನು ಶೇರ್‌ ಮಾಡಿ, ಆ ಆಟವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದೊಂದು ವಿಶೇಷ ರಾತ್ರಿ. ಈ ವ್ಯಕ್ತಿ ನನ್ನನ್ನು ಫಿಟ್​ನೆಸ್​ ಪರೀಕ್ಷೆ ರೀತಿ ಓಡಿಸಿದ ಎಂದು ಬರೆದುಕೊಂಡಿದ್ದರು.

ಕೊಹ್ಲಿ ಟ್ವೀಟ್​ ಮಾಡಿದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಚರ್ಚೆ ಹುಟ್ಟುಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ಕೂಡ ಆ ರೀತಿಯ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿತ್ತು.

Comments are closed.