ಅಂತರಾಷ್ಟ್ರೀಯ

ಸಿಖ್ ಯುವತಿ ಅಪಹರಿಸಿ, ಇಸ್ಲಾಂಗೆ ಮತಾಂತರಿಸಿ, ಯುವಕನ ಜೊತೆ ವಿವಾಹ

Pinterest LinkedIn Tumblr


ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಸಿಖ್ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಮುಸ್ಲಿಂ ಯುವಕನ ಜೊತೆ ವಿವಾಹ ಮಾಡಿರುವ ಘಟನೆ ಲಾಹೋರ್ ನ ನಾನ್ಕಾನಾ ಸಾಹೀಬ್ ಪ್ರದೇಶದಲ್ಲಿ ನಡೆದಿದೆ.

ಜಗ್ ಜಿತ್ ಕೌರ್ ಎಂಬ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಆಕೆಯ ಹೆಸರನ್ನು ಆಯೇಷಾ ಎಂದು ಮರುನಾಮಕರಣ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ನಾನ್ಕಾನಾ ಸಾಹೀಬ್ ಗುರುದ್ವಾರದ ಸಿಖ್ ಗುರುವಿನ ಮಗಳಾದ ಜಗ್ ಜಿತ್ ಳನ್ನು ಸ್ಥಳೀಯ ಮೌಲ್ವಿಯೊಬ್ಬ ಮುಸ್ಲಿಂ ಯುವಕನ ಜೊತೆ ವಿವಾಹ ಮಾಡಿಸಿರುವುದಾಗಿ ಸ್ಥಳೀಯ ಮಾಧ್ಯಮಗಳ ವರದಿ ಆರೋಪಿಸಿದೆ.

ಮುಸ್ಲಿಂ ಗುಂಪೊಂದು ಯುವತಿಯನ್ನು ಅಪಹರಿಸಿ, ಬಲವಂತದಿಂದ ಮತಾಂತರಗೊಳಿಸಿರುವುದಾಗಿ ಯುವತಿ ತಂದೆ ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕೆಂದು ಸಂತ್ರಸ್ತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ತನಿಖೆಗೆ ಆದೇಶ:

ಸಿಖ್ ಯುವತಿಯನ್ನು ಅಪಹರಿಸಿ, ಬಲವಂತದಿಂದ ಮತಾಂತರಗೊಳಿಸಿದ ಪ್ರಕರಣ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆಯೇ, ಪಾಕಿಸ್ತಾನ ಸರಕಾರ ತನಿಖೆ ನಡೆಸುವಂತೆ ಆದೇಶ ನೀಡಿದೆ.

ವರದಿ ಪ್ರಕಾರ, ಸಿಖ್ ಯುವತಿ ಅಪಹರಣದ ಪ್ರಕರಣ ತನಿಖೆ ನಡೆಸುವಂತೆ ಪಂಜಾಬ್(ಪಾಕಿಸ್ತಾನ) ಮುಖ್ಯಮಂತ್ರಿ ಸರ್ದಾರ್ ಉಸ್ಮಾನ್ ಬಝ್ ದಾರ್ ಆದೇಶ ನೀಡಿರುವುದಾಗಿ ತಿಳಿಸಿದೆ.

Comments are closed.