
ಈ ಸಂಸದರು ಮಾಡೋ ಒಳ್ಳೆ ಕೆಲಸಕ್ಕಿಂತ ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. ಯಾರ ಬಗ್ಗೆ ಹೇಳ್ತಾ ಇದ್ದೀವಿ ಅಂದ್ಕೊಂಡ್ರಾ ಮತ್ಯಾರು ಅಲ್ಲ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್.
ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸದ್ದು ಮಾಡೋ ಅಜಂಖಾನ್ ಚುನಾವಣೆ ವೇಳೆ ನಟಿ ಜಯಪ್ರದಾ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಅಜಂಖಾನ್ ಮೇಲೆ ವಿಚಿತ್ರ ಅನ್ನಿಸುವಂತೆ ಆರೋಪ ಒಂದು ಕೇಳಿಬಂದಿದೆ. ಹೌದು ಅಜಂಖಾನ್ ಎಮ್ಮೆ ಕದ್ದ ಆರೋಪಕ್ಕೆ ಗುರಿಯಾಗಿದ್ದಾರೆ.
ಆಸಿಫ್ ಹಾಗೂ ಝಾಕಿರ್ ಅಲಿ ಎಂಬುವವರು ಅಜಂಖಾನ್ ವಿರುದ್ಧ ಉತ್ತರಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದಾರೆ. ಘೋಶಿಯಾನ್ ಯತಿಮ್ಕಾನಾ ಪ್ರದೇಶದಲ್ಲಿದ್ದ ತಮ್ಮ ಮನೆಯಲ್ಲಿ ಸಂಸದ ಅಜಂಖಾನ್ ಹಾಗೂ ಮತ್ತೆ ಇನ್ನು ಐವರು ವಾಸವಿದ್ದರು. 2016 ಅಕ್ಟೋಬರ್ 15ರಂದು ಶಾಲೆ ಕಟ್ಟುವ ಉದ್ದೇಶದಿಂದ ಮನೆ ಖಾಲಿ ಮಾಡುವಂತೆ ಅಜಂಖಾನ್ಗೆ ಸೂಚಿಸಿದ್ದೆವು. ಆದ್ರೆ ಮನೆ ಖಾಲಿ ಮಾಡುವಾಗ ಅವರೆಲ್ಲಾ ಮನೆಯಲ್ಲಿದ್ದ ವಸ್ತುಗಳನ್ನು ನಾಶಮಾಡಿದ್ದಾರೆ. ಅಷ್ಟೇ ಅಲ್ಲದೇ, ನಮ್ಮ ಎಮ್ಮೆಯನ್ನು ಅಜಂಖಾನ್ ಕದ್ದೊಯ್ದಿದ್ದಾರೆ ಎಂದು ಆತ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಂಸದ ಅಜಂಖಾನ್, ಮಾಜಿ ಸರ್ಕಲ್ ಆಫೀಸರ್ ಅಲಾಯ್ ಹಸನ್ ಹಾಗೂ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಅಜಂಖಾನ್ ವಾಸವಿದ್ದಿದ್ದಕ್ಕೆ ಬಾಡಿಗೆ ರಶೀದಿಯ ದಾಖಲೆ ಕೂಡ ತಮ್ಮ ಬಳಿಯಿದೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ. ಈಗಾಗಲೇ ಅಜಂಖಾನ್ ವಿರುದ್ಧ ದ್ವೇಷದ ಭಾಷಣ, ಭೂ ಕಬಳಿಕೆ ಹಲವು ಆರೋಪಗಳಿದ್ದು, 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕಳೆದ ಕೆಲವು ತಿಂಗಳ ಹಿಂದಷ್ಟೇ ಬಿಜೆಪಿ ಸಂಸದೆ ರಮಾದೇವಿ ಬಗ್ಗೆ ಸಂಸತ್ನೊಳಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟೀಕೆ ಹಾಗೂ ಒತ್ತಾಯದ ನಂತರ ಅಜಂಖಾನ್ ಕ್ಷಮೆಯಾಚಿಸಿದ್ದರು. ಇದೀಗ ಅಜಂಖಾನ್ ಮತ್ತೆ ಸುದ್ದಿಗೆ ಬಂದಿದ್ದಾರೆ.
Comments are closed.