ಅಂತರಾಷ್ಟ್ರೀಯ

ಮೋದಿ ಚೆನ್ನಾಗಿ ಇಂಗ್ಲಿಷ್​ ಮಾತನಾಡುತ್ತಾರೆ ಆದರೆ ಮಾತನಾಡುವುದಿಲ್ಲ ಅಷ್ಟೇ; ಟ್ರಂಪ್​

Pinterest LinkedIn Tumblr


ಬಿಯಾರಿಟ್ಜ್​/ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯದ್ಬುತವಾಗಿ ಇಂಗ್ಲಿಷ್​ ಮಾತನಾಡುತ್ತಾರೆ. ಆದರೆ, ಮಾತನಾಡಲು ಇಷ್ಟಪಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಜಿ7 ಶೃಂಗಸಭೆ ಭಾಗವಾಗಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ ಸಾಂಪ್ರದಾಯಿಕವಾಗಿ ಮಾತುಕತೆ ಆರಂಭಿಸುವ ಮುನ್ನ ಟ್ರಂಪ್​ ಹೀಗೆ ತಮಾಷೆ ಮಾಡಿದ್ದಾರೆ. ಎರಡು ದೇಶಗಳ ನಾಯಕರು ಫ್ರೆಂಚ್​ನ ಬಿಯಾರಿಟ್ಜ್​ ನಗರದಲ್ಲಿ ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು.

ಇಬ್ಬರು ನಾಯಕರು ಹಸ್ತಲಾಘವ ನೀಡುವ ಮೂಲಕ ಮಾಧ್ಯಮ ಮುಂದೆ ಮಾತನಾಡಿದರು. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರಧಾನಿ ಮೋದಿ ಹಿಂದಿ ಭಾಷೆಯಲ್ಲಿ ಉತ್ತರ ನೀಡುತ್ತಿದ್ದರು. ಈ ವೇಳೆ ಟ್ರಂಪ್ ಅವರು ವಾಸ್ತವದಲ್ಲಿ ಇವರು (ಮೋದಿಗೆ) ಅದ್ಭುತವಾಗಿ ಇಂಗ್ಲಿಷ್​ ಮಾತನಾಡುತ್ತಾರೆ. ಆದರೆ, ಮಾತನಾಡಲು ಬಯಸುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದಾಗ, ಎಲ್ಲರೂ ಗೊಳ್​ ಎಂದು ನಕ್ಕರು.

Comments are closed.