ಅಂತರಾಷ್ಟ್ರೀಯ

ಮದುವೆಯಾದ ಕೆಲವೇ ಕ್ಷಣಗಳಲ್ಲಿ ಅಪಘಾತದಲ್ಲಿ ದಂಪತಿಯ ಸಾವು : ಕೊನೆಗೂ ಕೈಕೈ ಹಿಡಿದೇ ಪ್ರಾಣಬಿಟ್ಟರು !

Pinterest LinkedIn Tumblr

ಟೆಕ್ಸಾಸ್​: ಅವರು ಮಕ್ಕಳಾಗಿದ್ದಾಗಿನಿಂದಲೂ ಪರಸ್ಪರ ಇಷ್ಟಪಡುತ್ತಿದ್ದರು. ವಯಸ್ಕರಾದ ಬಳಿಕ ವಿವಾಹ ಬಂಧನಕ್ಕೆ ಒಳಗಾಗಿದ್ದರು. ನೋಂದಣಿ ಮದುವೆಯಾಗಿದ್ದ ಅವರಿಬ್ಬರೂ ಕೋರ್ಟ್​ ಆವರಣದಿಂದ ಹೊರಬಂದು ವಿವಾಹ ಆರತಕ್ಷತೆಗೆ ನಡೆಯಲಿದ್ದ ತಾಣಕ್ಕೆ ತೆರಳುವ ಸಂದರ್ಭದಲ್ಲಿ ಬೃಹತ್​ ಟ್ರಕ್​ ರೂಪದಲ್ಲಿ ಬಂದ ವಿಧಿ ಅವರಿಬ್ಬರ ಪ್ರಾಣವನ್ನು ಸೆಳೆದುಕೊಂಡು ಹೋಗಿದೆ.

ಟೆಕ್ಸಾಸ್​ನ ಮಾರ್ಗನ್​ (19) ಮತ್ತು ಬಾರ್ಡೆಕ್ಸ್​ (20) ಮೃತ ದಂಪತಿ. ತಾವಿಬ್ಬರೂ ವೈವಾಹಿಕ ಬಂಧನಕ್ಕೆ ಒಳಗಾದ ಸಂತಸದಲ್ಲಿದ್ದರು. ಪರಸ್ಪರ ಚುಂಬಿಸಿ ಸಂತಸವನ್ನು ಹಂಚಿಕೊಳ್ಳಲು ನವದಂಪತಿಗೆ ಅವಕಾಶ ಮಾಡಿಕೊಟ್ಟೆ. ಬಳಿಕ ಅವರಿಬ್ಬರೂ ತಮ್ಮ ಕಾರಿನಲ್ಲಿ ವಿವಾಹ ಆರತಕ್ಷತೆ ನಡೆಯಲಿದ್ದ ತಾಣಕ್ಕೆ ತೆರಳಲು ಮುಂದಾದರು. ಆರೆಂಜ್​ ಕೌಂಟಿ ಜಸ್ಟೀಸ್​ ಆಫ್​ ದ ಪೀಸ್​ ಜಾಯ್​ ಡ್ಯುಬೋಸ್​-ಸಿಮಾಂಟನ್​ ಆವರಣದಿಂದ ಹೊರಹೋಗುತ್ತಿದ್ದ ನವದಂಪತಿಯಿದ್ದ ಕಾರಿಗೆ ಎಡಬದಿಯಿಂದ ಬಂದ ಟ್ರಕ್​ ಒಂದು ಡಿಕ್ಕಿ ಹೊಡೆಯಿತು ಎಂದು ಆರೆಂಜ್​ ಪೊಲೀಸ್ ಕ್ಯಾಪ್ಟನ್​ ಕೀತ್​ ಲಾಂಗ್ಲೋಯಿಸ್​ ತಿಳಿಸಿದ್ದಾರೆ.

ಭಾರಿ ಟ್ರಾಕ್ಟರ್​ ಅನ್ನು ಹೊತ್ತು ಸಾಗುತ್ತಿದ್ದ ಟ್ರಕ್​ ಅಪ್ಪಳಿಸಿದ ರಭಸಕ್ಕೆ ನವದಂಪತಿಯಿದ್ದ ಕಾರು ಗಾಳಿಯಲ್ಲಿ ಹಲವು ಬಾರಿ ಪಲ್ಟಿ ಹೊಡೆದು ಬಿದ್ದಿತು. ನವದಂಪತಿಯಿಬ್ಬರು ಕೈಕೈ ಹಿಡಿದು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಹೇಳಿದ್ದಾರೆ.

ಟ್ರಕ್​ ಚಾಲಕನನ್ನು ಬಂಧಿಸಲಾಗಿದೆ. ಸಂಚಾರ ನಿಯಮದ ಉಲ್ಲಂಘನೆಯಾಗಿರುವ ಲಕ್ಷಣಗಳು ಕಾಣುತ್ತಿಲ್ಲ. ಚಾಲಕ ಮದ್ಯಪಾನ ಮಾಡಿರಲಿಲ್ಲ. ಮಾದಕವಸ್ತು ಸೇವಿಸಿರಲಿಲ್ಲ. ಆದರೂ ಆತನ ರಕ್ತ ಪರೀಕ್ಷೆ ಮಾಡಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Comments are closed.