ಅಂತರಾಷ್ಟ್ರೀಯ

ಕಾಶ್ಮೀರ ವಿಷಯಕ್ಕೆ ಇಂಡಿಯಾವನ್ನು ಬೆಂಬಲಿಸಿದ ರಷ್ಯಾ, ಪಾಕ್‌ ಪರ ನಿಂತ ಚೀನ!

Pinterest LinkedIn Tumblr


ಬೀಜಿಂಗ್‌: ಕಾಶ್ಮೀರ ವಿಶೇಷಸ್ಥಾನ ಮಾನ ರದ್ದು ಬಗ್ಗೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹಣಿಯಲು ಪಾಕಿಸ್ಥಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವಂತೆಯೇ, ಈ ವಿಚಾರದಲ್ಲಿ ಚೀನ ಪಾಕ್‌ ಬೆಂಬಲಕ್ಕೆ ನಿಂತಿದ್ದರೆ, ರಷ್ಯಾ ಭಾರತದ ಬೆಂಬಲಕ್ಕೆ ನಿಂತಿದೆ.

ಪಾಕಿಸ್ಥಾನದ ದೂರಿಗೆ ಸ್ಪಂದಿಸಿರುವ ಚೀನಾ, ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ್ದು, ಅದರಂತೆಯೇ ನಡೆದುಕೊಂಡಿದೆ. ಕಾಶ್ಮೀರ ಬಗ್ಗೆ ಗುಪ್ತ ಚರ್ಚೆ ನಡೆಸಲು ಕೋರಿ ಚೀನ ಪತ್ರ ಬರೆದಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಅದು ಪತ್ರ ಬರೆದಿದೆ. ಸಮಿತಿಯ ಆಗಸ್ಟ್‌ ತಿಂಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಪೋಲಂಡ್‌ಗೆ ಈ ಪತ್ರ ಬರೆದಿದೆ ಎಂದು ಉನ್ನತ ರಾಜತಾಂತ್ರಿರೊಬ್ಬರು ಹೇಳಿದ್ದಾರೆ. ಆದರೆ ಈ ಕುರಿತ ಸಭೆ ನಡೆಸುವ ಬಗ್ಗೆ, ದಿನಾಂಕ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದವರು ಹೇಳಿದ್ದಾರೆ.

ಇತ್ತ ಪಾಕ್‌ ರಷ್ಯಾದೊಂದಿಗೂ ಭಾರತ ವಿರುದ್ಧ ದೂರು ಹೇಳಿದೆ. ಆ.14ರಂದು ಈ ಬಗ್ಗೆ ಪಾಕ್‌ ವಿದೇಶಾಂಗ ಸಚಿವ ಎಸ್‌.ಎಂ. ಖುರೇಶಿ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಅವರಿಗೆ ಕರೆ ಮಾಡಿದ್ದಾರೆ. ಆದರೆ ಕಾಶ್ಮೀರ ವಿಚಾರದಲ್ಲಿ ದ್ವಿಪಕ್ಷೀಯ ಮಾತುಕತೆ ಮೂಲಕವೇ ಸಮಸ್ಯೆ ಪರಿಹರಿಸಿಕೊಳ್ಳಬೇಕೇ ವಿನಾ, ಇದರಲ್ಲಿ ವಿಶ್ವಸಂಸ್ಥೆ ಪಾತ್ರ ಏನೂ ಇಲ್ಲ ಎಂದು ಖುರೇಶಿ ಅವರಿಗೆ ಮನದಟ್ಟು ಮಾಡಿದ್ದಾಗಿ ರಷ್ಯಾದ ಅಧಿಕೃತ ಹೇಳಿಕೆಯಲ್ಲಿ ಹೇಳಲಾಗಿದೆ. ಆದ್ದರಿಂದ ಕಾಶ್ಮೀರ ವಿಚಾರದಲ್ಲಿ ಸದ್ಯಕ್ಕೆ ಚೀನ ಮಾತ್ರ ಪಾಕ್‌ಗೆ ಏಕೈಕ ಬೆಂಬಲಿಗ ದೇಶವಾಗಿದೆ.

Comments are closed.