ರಾಷ್ಟ್ರೀಯ

ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಕಾಲುವೆ ಬಳಿ ಸೆಲ್ಫಿ; ಕೊಚ್ಚಿಹೋದ ಅಮ್ಮ-ಪುತ್ರಿ

Pinterest LinkedIn Tumblr


ಭೋಪಾಲ್:ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಕಾಲುವೆ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ತಾಯಿ, ಮಗಳು ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ಮಧ್ಯಪ್ರದೇಶದ ಮಂದ್ ಸೌರ್ ನಲ್ಲಿ ನಡೆದಿದೆ.

ಬುಧವಾರ ಮಂದ್ ಸೌರ್ ಸರಕಾರಿ ಕಾಲೇಜಿನ ಪ್ರೊಫೆಸರ್ ಆರ್ ಡಿ ಗುಪ್ತಾ ಅವರು ಪತ್ನಿ ಬಿಂದು ಗುಪ್ತಾ(48ವರ್ಷ) ಹಾಗೂ ಮಗಳು ಅಶ್ರಿತಿ(22ವರ್ಷ) ಜತೆ ತಮ್ಮ ಮನೆ ಸಮೀಪದಲ್ಲಿ ತುಂಬಿ ಹರಿಯುತ್ತಿರುವ ಕಾಲುವೆಯನ್ನು ನೋಡಲು ಬುಧವಾರ ಬೆಳಗ್ಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಸೆಲ್ಫಿ ತೆಗೆಯಲು ನಿಂತುಕೊಂಡಿದ್ದ ಕೆಳಭಾಗ ಕುಸಿದು ಹೋಗಿ ತಾಯಿ ಮತ್ತು ಮಗಳು ಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಇಬ್ಬರ ಶವಗಳನ್ನು ಹೊರತೆಗೆಯಲಾಯಿತು ಎಂದು ವರದಿ ತಿಳಿಸಿದೆ.

ಘಟನೆ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ತಾಯಿ, ಮಗಳನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅವರನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಕೊನೆಗೆ ಮೃತದೇಹ ದೊರೆತಿರುವುದಾಗಿ ಮಂದ್ ಸೌರ್ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಚೌಧರಿ ತಿಳಿಸಿದ್ದಾರೆ.

Comments are closed.