ಅಂತರಾಷ್ಟ್ರೀಯ

370 ನೇ ವಿಧಿ ರದ್ದು!: ಪಾಕ್​ ನಲ್ಲಿ 300 ರ ಗಡಿದಾಟಿದ ಟೊಮೆಟೊ!!

Pinterest LinkedIn Tumblr


ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರೋದರಿಂದ ನೆರೆಯ ರಾಷ್ಟ್ರ ಪಾಕ್​ ಭಾರತದ ಮೇಲೆ ಮುನಿಸಿಕೊಂಡಿದೆ. ಅಷ್ಟೇ ಅಲ್ಲ, ಸಂಜೋತಾ ಎಕ್ಸ್​ಪ್ರೆಸ್ ರೈಲು ಸೇರಿದಂತೆ ಸಂಚಾರ ವ್ಯವಸ್ಥೆ ಮೇಲೂ ನಿರ್ಬಂಧ ಹೇರಿದೆ. ಅಷ್ಟೇ ಅಲ್ಲ ಈ ಮುನಿಸಿನಿಂದ ಪಾಕ್​ ಪಾಲಿಗೆ ಟೊಮೆಟೋವೇ ಬಾಂಬ್​ನಂತಾಗಿ ಪರಿಣಮಿಸಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.

ಹೌದು ಭಾರತ ಕಾಶ್ಮೀರಕ್ಕೆ ಅನಾದಿ ಕಾಲದಿಂದ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಇದರಿಂದ ಪಾಕ್​ ಭಾರತದ ಮೇಲೆ ಮುನಿಸಿಕೊಂಡಿದ್ದು, ಎಲ್ಲ ರೀತಿ ವ್ಯಾವಹಾರಿಕ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದೆ.
ಅಷ್ಟೇ ಅಲ್ಲ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಿರೋದರ ಜೊತೆಗೆ ಟೊಮೆಟೋ, ಈರುಳ್ಳಿಯಂತಹ ತರಕಾರಿಯ ಆಮದನ್ನು ನಿಲ್ಲಿಸಿದೆ. ಇದರಿಂದ ಪಾಕ್​ನಲ್ಲಿ ಟೊಮೆಟೋಗೆ ಭಾರಿ ಬೇಡಿಕೆ ಹೆಚ್ಚಿದ್ದು, ಅಂದಾಜು ಒಂದು ಕೆಜಿ ಟೊಮೆಟೊ ಬೆಲೆ 300 ರೂಪಾಯಿ ಗಡಿ ದಾಟಿದೆ.

ಇದುವರೆಗೂ ಪಾಕ್​ ಟೊಮೆಟೋ ಹಾಗೂ ಈರುಳ್ಳಿಯನ್ನು ಭಾರತದಿಂದ ಆಮದು ಮಾಡಿಸಿಕೊಳ್ಳುತ್ತಿದ್ದರಿಂದ ಪಾಕ್​ನಲ್ಲಿ ಈರುಳ್ಳಿ ಸೇರಿದಂತೆ ಎಲ್ಲ ತರಕಾರಿಗಳ ಬೆಲೆ ನಿಯಂತ್ರಣದಲ್ಲಿತ್ತು. ಆದರೆ ಈಗ ಆಮದು ನಿಲ್ಲಿಸಿರೋದರಿಂದ ಬೆಲೆ ಗಗನಕ್ಕೇರಿದೆ.
ಇನ್ನು ಪಾಕ್​ನ ಈ ನಿರ್ಣಯ ಸ್ವತಃ ಪಾಕಿಸ್ತಾನದ ವ್ಯಾಪಾರಿಗಳ ಅಸಮಧಾನಕ್ಕೆ ಕಾರಣವಾಗಿದ್ದು, ಈ ರೀತಿ ನಿರ್ಧಾರದಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ ಎಂದಿದ್ದಾರೆ. ಇದಲ್ಲದೇ ರಾಸಾಯನಿಕ ವಸ್ತುಗಳಿಗಾಗಿಯೂ ಪಾಕ್​ ಭಾರತವನ್ನು ಅವಲಂಬಿಸಿದೆ. ಹೀಗಾಗಿ ಪಾಕ್​ ಇದೇ ಮನಸ್ಥಿತಿಯನ್ನು ಮುಂದುವರೆಸಿದರೇ ನಷ್ಟಕ್ಕೆ ಗುರಿಯಾಗಲಿದೆ ಎಂದ ಅಭಿಪ್ರಾಯ ಪಾಕ್​ ನೆಲದಲ್ಲಿಯೇ ವ್ಯಕ್ತವಾಗಿದೆ.

Comments are closed.