ಅಂತರಾಷ್ಟ್ರೀಯ

ಸಂಝೋತಾ ನಂತರ ಥಾರ್‌ ಎಕ್ಸ್‌ಪ್ರೆಸ್‌ ರೈಲನ್ನೂ ರದ್ದುಗೊಳಿಸಿದ ಪಾಕ್‌!

Pinterest LinkedIn Tumblr


ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಕ್ರಮಕ್ಕೆ ಸೇಡಿನ ಕ್ರಮ ಕೈಗೊಂಡಿರುವ ಪಾಕಿಸ್ಥಾನ ಸಂಝೋತಾ ರೈಲನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಅದಾದ ಬೆನ್ನಲ್ಲೇ ಈಗ ಇನ್ನೊಂದು ರೈಲನ್ನೂ ಅದು ರದ್ದುಗೊಳಿಸಿದೆ.

ಪಾಕ್‌ನ ಖೋಕ್ರಾಪುರ್‌ನಿಂದ ರಾಜಸ್ಥಾನದ ಮುನಾಬಾವೋಗೆ ಸಂಚರಿಸುವ ಥಾರ್‌ ಎಕ್ಸ್‌ಪ್ರೆಸ್‌ ರೈಲನ್ನೂ ರದ್ದುಗೊಳಿಸಿದೆ. ಥಾರ್‌ ಎಕ್ಸ್‌ಪ್ರೆಸ್‌ನೂ ನಾವು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಶುಕ್ರವಾರದ ಯಾನ ಕೊನೆಯದ್ದಾಗಿರಲಿದೆ ಎಂದು ಪಾಕ್‌ ರೈಲ್ವೇ ಸಚಿವ ಶೇಖ್‌ ರಶೀದ್‌ ಹೇಳಿದ್ದಾರೆ. ನಾನು ರೈಲ್ವೇ ಸಚಿವ ಆಗಿರುವಲ್ಲಿವರೆಗೂ ಭಾರತ-ಪಾಕ್‌ ಮಧ್ಯೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದವರು ಹೇಳಿದ್ದಾರೆ.

Comments are closed.