ಅಂತರಾಷ್ಟ್ರೀಯ

149 ವರ್ಷದ ಬಳಿಕ ಗುರು ಪೂರ್ಣಿಮೆ ಜೊತೆ ಆಗಮಿಸುತ್ತಿರುವ ಚಂದ್ರ ಗ್ರಹಣ!

Pinterest LinkedIn Tumblr

0
ಈ ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಇದೇ ಜುಲೈ 16 ಮತ್ತು 17ನೇ ತಾರೀಖು ಗೋಚರವಾಗಲಿದೆ. ಮಧ್ಯರಾತ್ರಿ ಕಾಣಿಸಿಕೊಳ್ಳುವ ಈ ಗ್ರಹಣವನ್ನು ಯಾವುದೇ ತಂತ್ರಜ್ಞಾನ ಬಳಸದೇ ಬರಿಗಣ್ಣಿನಿಂದ ವೀಕ್ಷಿಸಬಹುದು. ಧರ್ಮಶಾಸ್ತ್ರಗಳ ಪ್ರಕಾರ ಚಂದ್ರಗ್ರಹಣದ ಸೂತಕ, ಗ್ರಹಣಕ್ಕೂ 9 ಗಂಟೆ ಮುನ್ನವೇ ಅಂದರೆ, ಜುಲೈ 16 ಸಂಜೆ 4.30 ರಿಂದಲೇ ಆರಂಭವಾಗಲಿದೆ.

ಈ ಗುರುವಾರ(ಜು.16) ಗುರು ಪೂರ್ಣಿಮೆಯ ದಿನ. ಅಂದೇ ಚಂದ್ರಗ್ರಹಣವು ಸಂಭವಿಸುವುದರಿಂದ ಗುರು ಪೂರ್ಣಿಮೆಯನ್ನು ಆಚರಿಸುವುದು ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಚಂದ್ರ ಗ್ರಹಣ ಮತ್ತು ಗುರು ಪೂರ್ಣಿಮೆ ಒಂದೇ ಸಮಯದಲ್ಲಿ ಘಟಿಸುವಾಗ ಗೊಂದಲ ಉಂಟಾಗುವುದು ಸಹಜ. 1870ರಲ್ಲಿ ಅಪರೂಪದ ಚಂದ್ರಗ್ರಹಣ ಸಂಭವಿಸಿತ್ತು. ಅದಾದ 149 ವರ್ಷಗಳ ನಂತರ ಗುರು ಪೂರ್ಣಿಮೆ ದಿನವೇ ಸಂಭವಿಸುತ್ತಿರುವ ಚಂದ್ರ ಗ್ರಹಣ ಇದಾಗಿದೆ.

ಶುಕ್ರವಾರ ರಾತ್ರಿ 11 ಗಂಟೆಯ ಬಳಿಕ ಶುರುವಾಗುವ ಗ್ರಹಣವು ಬೆಳಿಗಿನ ಜಾವ 3 ಗಂಟೆಗೆ ಕೊನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅಲ್ಲದೇ ಗುರು ಪೂರ್ಣಿಮ ದಿನದಂದೇ ಸಂಭವಿಸುತ್ತಿರುವ ಈ ಗ್ರಹಣಕ್ಕಿಂತಲೂ ಮುಂಚೆಯೇ ಪೂಜಾ ಕಾರ್ಯಗಳನ್ನು ನೆರವೇರಿಸಬೇಕಾಗುತ್ತದೆ.

ಈ ವರ್ಷದ ಗುರು ಪೂರ್ಣಿಮೆಯು ಆಶಾಢ ಮಾಸದ ಹದಿನೈದನೇ ದಿನದಂದು ಆಚರಿಸಲಾಗುತ್ತಿದೆ. ಅದು ಈ ವರ್ಷ ಜುಲೈ 16ರಂದು ಬರುತ್ತಿದೆ. ಪೂರ್ಣಿಮೆಯ ತಿಥಿ ಜುಲೈ 16 ಮಧ್ಯರಾತ್ರಿ 12.13 ರಿಂದ ಪ್ರಾರಂಭವಾಗುವುದು. ಇದು ಜುಲೈ 17ರಂದು 5.47 ಬೆಳಿಗ್ಗೆ ತನಕ ಮುಂದುವರಿಯುವುದು.

ಹಿಂದೂಗಳು, ಬೌದ್ಧರು ಮತ್ತು ಜೈನರು ಪ್ರಾಥಮಿಕವಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಭಾರತದಲ್ಲಿ ವಿವಿಧ ಸಂಪ್ರದಾಯಗಳ ಪ್ರಕಾರ ಈ ಪೂಜೆಯು ಶಿವ, ಬುದ್ಧ ಮತ್ತು ವೇದವ್ಯಾಸರಿಗೆ ಅರ್ಪಿತವಾಗಿದೆ. ಜನರು ತಮ್ಮದೇ ಆದ ಗುರುಗಳಿಗೆ ಪ್ರಾರ್ಥನೆಯನ್ನು ಸಲ್ಲಿಸುವರು. ಗುರುವು ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವನು. ಹಾಗಾಗಿ ಪ್ರತಿವರ್ಷ ಗುರುವಿನ ಗೌರವಾರ್ಥವಾಗಿ ಆಧ್ಯಾತ್ಮಿಕ ರೂಪದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಗುವುದು.

ಗುರು ಪೂರ್ಣಿಮೆಯ ದಿನವೇ ಚಂದ್ರಗ್ರಹಣ ಬಂದಿರುವುದರಿಂದ ಯಾವ ದಿನ ಮತ್ತು ಸಮಯದಲ್ಲಿ ಪೂಜೆ ಸಲ್ಲಿಸಬೇಕು ಎನ್ನುವ ಗೊಂದಲವಿದೆ. ಏಕೆಂದರೆ ಗ್ರಹಣವು ಸೂತಕಕಾಲ ಎಂದು ಹೇಳಲಾಗುವುದು. ಈ ದುರಾದೃಷ್ಟದ ಸಮಯದಲ್ಲಿ ಪೂಜೆಯನ್ನು ಕೈಗೊಳ್ಳಬಾರದು.

Comments are closed.