
ಜಕಾರ್ತಾ: ಅಳಿಯ ಜನನಾಂಗದ ಗಾತ್ರ ಹೆಚ್ಚಾಗಿದ್ದ ಕಾರಣ ನೋವು ತಾಳಲಾಗದೆ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಮಾವನೇ ಪೋಲೀಸರಿಗೆ ದೂರಿತ್ತ ಘಟನೆ ಇಂಡೋನೇಷಿಯಾದ ಪೂರ್ವ ಜಾವಾದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದಷ್ತೇ ಹೆಂಡತಿಯನ್ನು ಕಳೆದುಕೊಂಡಿದ್ದ ವ್ಯಕ್ತಿಯನ್ನು ಆತನ ಮಾವ ನೀಡಿದ್ದ ದೂರಿನ ಹಿನ್ನೆಲೆ ಪೋಲೀಸರು ವಶಕ್ಕೆ ಪಡೆದು “ಪರೀಕ್ಷೆ” ನಡೆಸಿ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿದ್ದಾರೆ.
ಘಟನೆ ವಿವರ
ಕೆಲ ವರ್ಷಗಳ ಹಿಂದೆ ತನ್ನ ಮಗಳು ಜುಮಂತ್ರಿಯನ್ನು ನೇದಿ (55) ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದ. ವಿವಾಹದ ನಂತರ ದಂಪತಿಗಳು ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸಿದ್ದರು.
ಆದರೆ ಕಳೆದ ಫೆಬ್ರವರಿ 25ರ ಬೆಳಿಗ್ಗೆ ಜುಮಂತ್ರಿ ರಾತ್ರಿ ,ಮಲಗಿರುವಾಗಲೇ ಸಾವನ್ನಪ್ಪಿದ್ದು ಬೆಳಿಗ್ಗೆ ಎದ್ದೇಳಲಿಲ್ಲ. ಮನೆಯವರು, ಕುಟುಂಬ ಅದೊಂದು ಸಹಜ ಸಾವೆಂದು ಬಗೆದು ಅಂತ್ಯಕ್ರಿಯೆಯನ್ನು ನಡೆಸಿದೆ.
ಆದರೆ ಹೀಗೆ ಅಂತ್ಯಕ್ರಿಯೆ ನಡೆದು ಕೆಲ ದಿನಗಳ ತರುವಾಯ ಊರಿನಲ್ಲೆಲ್ಲಾ ಜುಮಂತ್ರಿ ಪತಿಯ ಜನನಾಂಗ ದೊಡ್ಡ ಗಾತ್ರದ್ದಾಗಿದ್ದು ಆಕೆಯು ಆ ನೋವನ್ನು ತಾಳಲಾಗದೆ ಸಾವನ್ನಪ್ಪಿದ್ದಾಳೆ ಎಂದು ಗುಲ್ಲು ಹರಡಿದೆ. ಇದು ಜುಮಂತ್ರಿಯ ತಂದೆ ನೇದಿ ಕಿವಿಗೆ ಬಿದ್ದಿದ್ದು ಆತ ಮಗಳ ಸಾವಿಗೆ “ನ್ಯಾಯ” ದೊರಕಿಸಿಕೊಡಬೇಕೆಂದು ಪೋಲೀಸರಿಗೆ ದೂರು ಕೊಟ್ಟಿದ್ದಾನೆ.
ದೂರು ಪಡೆದ ಪೋಲೀಸರು ನೇದಿಯ ಅಳಿಯನನ್ನು ಕರೆದೊಯ್ದು ಪರೀಕ್ಷೆ ನಡೆಸಿದ್ದಾರೆ. ಆದರೆ ಆತನ ಜನನಾಂಗ ಸಾಮಾನ್ಯ ಗಾತ್ರದ್ದೇ ಆಗಿದೆ ಎಂಬುದು ಪರೀಕ್ಷೆಯಿಂದ ಬಯಲಾಗಿದೆ. ಹಾಗಾಗಿ ನೇದಿ ಆರೋಪ ಸಾಬೀತಾಗಿಲ್ಲದ ಕಾರಣ ಅಳಿಯನನ್ನು ಬಿಡುಗಡೆಗೊಳಿಸಿದ್ದಾರೆ.
ಇತ್ತ ಜುಮಂತ್ರಿ ಸಾವಿಗೆ ಆಕೆಗೆ ಹದಿನಾಲ್ಕು ವರ್ಷಗಳಿಂದ ಇದ್ದಂತಹಾ ಎಪಿಲೆಪ್ಸ್ ಖಾಯಿಲೆಯೇ ಕಾರಣವೆಂದು ಪರೀಕ್ಷೆಯಿಂದ ರುಜುವಾತಾಗಿದೆ.
ಏನೇ ಆದರೂ ಆಒಂದು ಪ್ರಕರ್ಣ ನೇದಿ ಅಳಿಯನನ್ನು ಇಂದು ವಿಶ್ವಪ್ರಸಿದ್ದ ವ್ಯಕ್ತಿಯನ್ನಾಗಿಸಿದ್ದು ಸುಳ್ಳಲ್ಲ.
Comments are closed.