ಅಂತರಾಷ್ಟ್ರೀಯ

ಪಂಚತಾರಾ ಹೋಟೆಲ್ ಮೇಲೆ ದಾಳಿ ಹಿನ್ನೆಲೆ; ಜೆಯುಡಿ, ಜೆಇಎಂ ಸೇರಿ 11 ಉಗ್ರ ಸಂಘಟನೆಗಳ ನಿಷೇಧಿಸಿದ ಪಾಕ್

Pinterest LinkedIn Tumblr

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪಂಚತಾರಾ ಹೊಟೆಲ್ ದಾಳಿ ಬೆನ್ನಲ್ಲೇ ಇಮ್ರಾನ್ ಖಾನ್ ಸರ್ಕಾರ ಜೆಯುಡಿ, ಜೆಇಎಂ ಸೇರಿ 11 ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ.

ಸಂಸತ್ ದಾಳಿ ರೂವಾರಿ, ಉಗ್ರ ಮಸೂದ್ ಅಜರ್ ನೇತೃತ್ವದ ಜೈಷ್ ಇ ಮೊಹಮದ್, 2008 ಮುಂಬೈ ದಾಳಿ ರೂವಾರಿ ಹಫೀಜ್ ಸೈಯ್ಯೀದ್ ನೇತೃತ್ವದ ಜಮಾತ್ ಉದ್ ದವಾ, ಫಲಾಹ್ ಇ ಇನ್ಸಾನಿಯತ್ ಸೇರಿದಂತೆ ಒಟ್ಟು 11 ಸಂಘಟನೆಗಳನ್ನು ನಿಷೇಧಿಸಿದೆ. ಇಮ್ರಾನ್ ಖಾನ್ ನೇತೃತ್ವದಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನ ಸರ್ಕಾರ ತನ್ನ ಆ್ಯಕ್ಷನ್ ಪ್ಲಾನ್ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಕಳೆದ ಮೇ 1ರಂದು ವಿಶ್ವಸಂಸ್ಥೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ನಿನ್ನೆಯಷ್ಟೇ ಉಗ್ರರು ಮುಂಬೈ ದಾಳಿ ಮಾದರಿಯಲಿ ಪಾಕಿಸ್ತಾನದ ಪಂಚತಾರಾ ಹೊಟೆಲ್ ಗೆ ನುಗ್ಗಿ ದಾಳಿ ಮಾಡಿದ್ದಾರೆ.

ನಿಷೇಧಗೊಂಡ ಸಂಘಟನೆಗಳು:
1. ಅಲ್ ಅನ್ಫಾಲ್ ಟ್ರಸ್ಟ್
2. ಇದಾರಾ ಇ ಕಿದ್ಮತ್ ಇ ಖೈಗ್
3. ಅಲ್ ದಾವತ್ ಉಲ್ ಇರ್ಷಾದ್
4. ಅಲ್ ಫಜಲ್ ಫೌಂಡೇಷನ್ ಮತ್ತು ಟ್ರಸ್ಟ್
5. ಮಾಸ್ಕ್ ಅಂಡ್ ವೆಲ್ ಫೇರ್ ಟ್ರಸ್ಟ್
6. ಅಲ್ ಮದೀನಾ ಫೌಂಡೇಷನ್
7. ಮೋವಾಜ್ ಬಿನ್ ಜಬಿ ಎಜುಕೇಷನ್ ಟ್ರಸ್ಟ್
8. ಅಲ್ ಎಸ್ಸಾರ್ ಫೌಂಡೇಷನ್
9. ಅಲ್ ರಹ್ಮತ್ ಟ್ರಸ್ಟ್ ಆರ್ಗನೈಜೇಷನ್
10. ಅಲ್ ಹಮಾದ್ ಟ್ರಸ್ಟ್
11. ಅಲ್ ಫುರ್ಖಾನ್ ಟ್ರಸ್ಟ್

Comments are closed.