ಅಂತರಾಷ್ಟ್ರೀಯ

ಒಂದೇ ದಿನದಲ್ಲಿ 153.83 ಕೆಜಿ ಕೂದಲು ದಾನ ಮಾಡಿ ಗಿನ್ನೆಸ್ ದಾಖಲೆ!

Pinterest LinkedIn Tumblr


ಕ್ಯಾಲಿಫೋರ್ನಿಯಾ: ಅಮೆರಿಕದ ‘ದ ಲಾಂಗ್‌ಹೇರ್ಸ್’ ಕಂಪನಿ ಗಿನ್ನೆಸ್‌ ದಾಖಲೆಯನ್ನು ಮಾಡಿದ್ದಾರೆ. 24 ಗಂಟೆಗಳಲ್ಲೇ ಅತಿ ಹೆಚ್ಚು ಕೂದಲುಗಳನ್ನು ದಾನ ಮಾಡುವ ಮೂಲಕ ಈ ದಾಖಲೆ ಮಾಡಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯಾಗೋದಲ್ಲಿ ‘ದ ಲಾಂಗ್‌ಹೇರ್ಸ್’ ಕಂಪನಿ ಅತಿ ಹೆಚ್ಚು ಕೂದಲುಗಳನ್ನು ದಾನ ಮಾಡುವ ಮೂಲಕ ಗಿನ್ನೆಸ್‌ ದಾಖಲೆ ಮಾಡಿದೆ. 24 ಗಂಟೆಗಳಲ್ಲಿ 153.83 ಕೆಜಿ ತೂಕದ ಕೂದಲುಗಳನ್ನು ದಾನ ಮಾಡುವ ಮೂಲಕ ಅವರು ಈ ದಾಖಲೆ ಮಾಡಿದ್ದಾರೆ.

ದಾನಕ್ಕಾಗಿ ಕೂದಲು ಕತ್ತರಿಸುವ ಕಾರ್ಯಕ್ರಮದಲ್ಲಿ ಈ ದಾಖಲೆ ಸೃಷ್ಟಿಯಾಗಿದ್ದು, ಈ ಕೂದಲನ್ನು ಕೂದಲು ಉದುರುವ ಸಮಸ್ಯೆ ಇರುವ ಮಕ್ಕಳಿಗೆ ನೀಡಲಾಗವುದು. ಆರೋಗ್ಯದ ಕಾರಣದಿಂದ ಕೂದಲು ಉದುರುವ ಸಮಸ್ಯೆ ಇರುವ ಮಕ್ಕಳಿಗೆ ಉಚಿತ ಬದಲಿ ಕೂದಲುಗಳನ್ನು ಒದಗಿಸುವ ಸಂಸ್ಥೆಗಳಿಗೆ ದಾನ ಮಾಡಲಾಗುವುದು ಎಂದು ತಿಳಿದುಬಂದಿದೆ.

ಕ್ರಿಸ್‌ ಹೀಲಿ ಹಾಗೂ ಲಿಂಡ್ಸೇ ಬಾರ್ಟೋ ‘ದ ಲಾಂಗ್‌ಹೇರ್ಸ್’ ಕಂಪನಿಯ ಸಹ ಸಂಸ್ಥಾಪಕರು ಎಂದು ತಿಳಿದುಬಂದಿದ್ದು, ಪ್ರಪಂಚದ ಮೇಲೆ ಧನಾತ್ಮಕ ಪರಿಣಾಮ ಬೀರುವ ಕಾರ್ಯಕ್ರಮವೊಂದನ್ನು ಮಾಡುವ ಗುರಿ ಹೊಂದಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್‌ ರೆಕಾರ್ಡ್ಸ್‌ ಸಂಸ್ಥೆ ತಿಳಿಸಿದೆ.

ಇನ್ನು, ಈ ಚಾರಿಟಿ ಕಾರ್ಯಕ್ರಮವನ್ನು ದಿ ಗ್ರೇಟ್‌ ಕಟ್‌ ಎಂದು ಕರೆಯಲಾಗಿದ್ದು, ಈ ವೇಳೆ ದೇಶಾದ್ಯಂತ 2,834 ಜನರು ಕೂದಲನ್ನು ದಾನ ಮಾಡಿದ್ದಾರೆ.

ಕ್ರಿಸ್‌ ಹೀಲಿ ತನ್ನ 14 ಇಂಚುಗಳಷ್ಟು ಕೂದಲು ದಾನ ಮಾಡಿದ್ದರೆ, ಬಾರ್ಟೋ ತನ್ನ ಕೂದಲನ್ನು ಸಂಪೂರ್ಣ ಶೇವ್‌ ಮಾಡಿಸುವ ಮೂಲಕ 24 ಇಂಚುಗಳಷ್ಟು ಕೂದಲು ದಾನ ಮಾಡಿದ್ದಾರೆ.

Comments are closed.