ಹೊಸದಿಲ್ಲಿ : ವಿವಾದಿತ ಅಶ್ಲೀಲ ಕರಪತ್ರ ವಿಚಾರದಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧದ ತನ್ನ ಪ್ರತಿ ದಾಳಿಯನ್ನು ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಇಂದು ಶುಕ್ರವಾರ ತೀವ್ರಗೊಳಿಸಿದ್ದಾರೆ.
“ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ನನ್ನ ಎದುರು ಸೆಣಸುತ್ತಿರುವ ಆಪ್ ಅಭ್ಯರ್ಥಿ ಆತಿಶಿ ಮರ್ಲಿನಾ ವಿರುದ್ಧದ ಮಾನಹಾನಿಕರ ಕರಪತ್ರಕ್ಕೂ ನನಗೂ ನಂಟಿದೆ ಎಂಬುದನ್ನು ಆಮ್ ಆದ್ಮಿ ಪಕ್ಷ ಸಾಬೀತುಪಡಿಸಿದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ. ಹಾಗೆಯೇ ಆರೋಪ ಸಾಬೀತುಪಡಿಸಲು ಆಪ್ ವಿಫಲವಾದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ರಾಜಕೀಯವನ್ನು ತೊರೆಯಬೇಕು’ ಎಂದು ಗೌತಮ್ ಗಂಭೀರ್ ಸವಾಲು ಹಾಕಿದ್ದಾರೆ.
ಈ ನಡುವೆ ಪೂರ್ವ ದಿಲ್ಲಿ ಸಂಸದೀಯ ಕ್ಷೇತ್ರದ ಚುನಾವಣಾಧಿಕಾರಿ ಕೆ ಮಹೇಶ್ ಅವರನ್ನು ಬಿಜೆಪಿ ಸಂಪರ್ಕಿಸಿ ಗಂಭೀರ್ ವಿರುದ್ಧದ ಆರೋಪಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಚುನಾವಣಾಧಿಕಾರಿ ಈ ಪ್ರಕರಣ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರನ್ನು ಕೇಳಿ ಕೊಂಡಿದ್ದಾರೆ.