ಅಂತರಾಷ್ಟ್ರೀಯ

ಥೈಲ್ಯಾಂಡ್​​​ ರಾಜನನ್ನು ಮದುವೆಯಾಗಿ ರಾಣಿಯಾದ ಬಾಡಿಗಾರ್ಡ್​!

Pinterest LinkedIn Tumblr


ಬ್ಯಾಂಕಾಕ್​: ಸಹೋದ್ಯೋಗಿ, ಸಹಪಾಠಿಯನ್ನು ಮದುವೆಯಾಗುವುದು ಸರ್ವೇ ಸಾಮಾನ್ಯ. ಆದರೆ, ಥೈಲ್ಯಾಂಡ್​ ರಾಜ ತಮ್ಮ ಅಂಗರಕ್ಷಕಿಯನ್ನೇ ವರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆ ಬಾಡಿಗಾರ್ಡ್​​ಗೆ ರಾಣಿ ಪಟ್ಟ ನೀಡಿದ್ದಾರೆ.

66 ವರ್ಷದ ವಜಿರಲೊಂಗ್​ಕಾರ್ನ್​​ ಥೈಲ್ಯಾಂಡ್​ನ ರಾಜ. ಇವರ ತಂದೆ 2016ರಲ್ಲಿ ಮೃತಪಟ್ಟಿದ್ದರು. ಇದಾದ ನಂತರ ವಜಿರಲೊಂಗ್​ಕಾರ್ನ್​​ಗೆ ರಾಜನ ಪಟ್ಟ ನೀಡಲಾಗಿತ್ತು. ಈಗಾಗಲೇ ವಜಿರಲೊಂಗ್​ಕಾರ್ನ್ ಮೂರು ಮದುವೆ ಆಗಿದ್ದು, ಎಲ್ಲರಿಗೂ ವಿಚ್ಛೇದನ ನೀಡಿದ್ದಾರೆ. ಅಷ್ಟೇ ಅಲ್ಲ ಈ ರಾಜನಿಗೆ 7 ಮಕ್ಕಳಿದ್ದಾರೆ. ಈಗ ನಾಲ್ಕನೇ ಪತ್ನಿಯಾಗಿ ಬಾಡಿಗಾರ್ಡ್ ಅನ್ನು​​ ಮದುವೆಯಾಗಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, “ಜನರಲ್​ ಸುಥಿದಾ ಅವರನ್ನು ವಜಿರಲೊಂಗ್​ಕಾರ್ನ್ ವಿವಾಹವಾಗುತ್ತಿದ್ದಾರೆ. ಈ ಮೂಲಕ ಅವರಿಗೆ ರಾಣಿ ಪಟ್ಟ ನೀಡುತ್ತಿದ್ದಾರೆ” ಎಂದು ತಿಳಿಸಲಾಗಿದೆ.

ಈ ಮೊದಲು ಇವರು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ, ತಮ್ಮ ಸಂಬಂಧದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. 2014ರಲ್ಲಿ ವಜಿರಲೊಂಗ್​ಕಾರ್ನ್ ಭದ್ರತಾ ಕೆಲಸಕ್ಕೆ ಸುಥಿದಾ ಅವರನ್ನು ನೇಮಕ ಮಾಡಿಕೊಂಡಿದ್ದರು. ನಂತರ ಇವರ ಮಧ್ಯೆ ಪ್ರೀತಿ ಮೊಳೆತಿತ್ತು.

Comments are closed.