ಅಂತರಾಷ್ಟ್ರೀಯ

ಸರಣಿ ಬಾಂಬ್ ಸ್ಪೋಟದ 3 ದಿನಗಳ ಬಳಿಕ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆ!

Pinterest LinkedIn Tumblr

ಕೊಲಂಬೋ: ಬರೊಬ್ಬರಿ 359 ಮಂದಿಯ ಸಾವಿಗೆ ಕಾರಣವಾಗಿದ್ದ ಇಸಿಸ್ ಉಗ್ರರ ಮಾರಣ ಹೋಮ ನಡೆದ ಮೂರು ದಿನಗಳ ಬಳಿಕ ಶ್ರೀಲಂಕಾದ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗಿದೆ.

ಈಸ್ಟರ್ ಸಂಡೇ ದಿನದಂದೇ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್ ಮತ್ತು ಖಾಸಗಿ ಶಾಂಗ್ರಿಲಾ ಹೊಟೆಲ್ ನಲ್ಲಿ ನಡೆದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಈ ವರೆಗೂ ಸುಮಾರು 359 ಮಂದಿ ಸಾವನ್ನಪ್ಪಿದ್ದಾರೆ. ಮೂರು ಚರ್ಚ್ ಗಳು, ನಾಲ್ಕು ಹೊಟೆಲ್ ಗಳಲ್ಲಿ ಆತ್ಮಹತ್ಯಾ ದಾಳಿಕೋರರು ಬಾಂಬ್ ಸ್ಫೋಟ ನಡೆಸಿ 359 ಮಂದಿಯ ಸಾವಿಗೆ ಕಾರಣರಾಗಿದ್ದರು. ಅಲ್ಲದೆ ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸಿಸ್ ಜೊತೆ ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆ ನ್ಯಾಷನಲ್ ಥೌವೀತ್ ಜಮಾತ್ ಕೈ ಜೋಡಿಸಿ ಈ ಕುಕೃತ್ಯ ನಡೆಸಿತ್ತು.

ಈ ಹಿಂದೆ ಕಳೆದ ಮಾರ್ಚ್ ನಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ನಡೆದಿದ್ದ ಸಾಮೂಹಿಕ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸಿಸ್ ತನ್ನ ಮುಖವಾಣಿ ಅಮಾಖ್ ನಲ್ಲಿ ಹೇಳಿತ್ತು.

ಈ ಘಟನೆ ನಡೆದ ಬಳಿಕ ಕೊಲಂಬೋದ ಸುಮಾರು 87 ಕಡೆಗಳಲ್ಲಿ ಪೈಪ್ ಬಾಂಬ್ ಗಳು ಕೂಡ ಪತ್ತೆಯಾಗಿ ವ್ಯಾಪಕ ಆತಂಕ ಸೃಷ್ಟಿಯಾಗಿತ್ತು. ಆದರೆ ಇದೀಗ ಇದೇ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗುವ ಮೂಲಕ ಮತ್ತೆ ಆತಂಕ ಸೃಷ್ಟಿಸಿದೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಶ್ರೀಲಂಕಾ ಭದ್ರತಾ ಪಡೆಗಳು ಪರಿಶೀಲನೆ ನಡೆಸುತ್ತಿದ್ದು, ಶ್ರೀಲಂಕಾದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕೊಲಂಬೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

Comments are closed.