ಅಂತರಾಷ್ಟ್ರೀಯ

ಮಕ್ಕಳಿಲ್ಲ ಎಂದು ವೈದ್ಯರ ಬಳಿ ಚಿಕಿತ್ಸೆಗೆ ಹೋದ ಮಹಿಳೆಗೆ ವಂಚಿಸಿ ತಾಯ್ತನದ ಭಾಗ್ಯ ಕರುಣಿಸಿದ 89 ವರ್ಷದ ವೈದ್ಯ ! ವಂಚಿಸಿದ ರೀತಿ ಕೇಳಿದ್ರೆ ಶಾಕ್ ಆಗ್ತೀರಿ…

Pinterest LinkedIn Tumblr

ಮಕ್ಕಳಿಲ್ಲ ಎಂದು ವೈದ್ಯರ ಬಳಿ ಚಿಕಿತ್ಸೆಗೆ ಹೋಗುವುದು ಸಾಮಾನ್ಯ. ಆದರೆ ಆ ವೈದ್ಯ ಚಿಕಿತ್ಸೆ ಕೊಡುವ ಬದಲು ತಾನೇ ರೋಗಿಗಳಿಗೆ ತಾಯ್ತನದ ಭಾಗ್ಯ ಕರುಣಿಸಿದರೆ ಹೇಗಿರಬೇಡ! ಇದು ಓದೋಕೆ ಒಂದು ರೀತಿ ಎನಿಸಿದರೆ, ಇಂತಹ ಘಟನೆ ನಿಜ ಜೀವನದಲ್ಲಿ ನಡೆದರೆ, ಆ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಗಾಗಿರಬೇಡ ಹೇಳಿ. ಅದು ಊಹಿಸಲೂ ಸಾಧ್ಯವಿಲ್ಲ. ಆದರೆ ಇಂತಹದೊಂದು ಘಟನೆ ನಡೆದಿದೆ ಅನ್ನೋದಂತು ಸತ್ಯ.

ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ಮನುಷ್ಯನ ಆಯಸ್ಸು ಹೆಚ್ಚಾಗುತ್ತಿದ್ದು, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಅದರಲ್ಲಿ ಬಂಜೆತನವೂ ಒಂದು. ಅದಕ್ಕೆ ಪರಿಹಾರವಾಗಿ ವೀರ್ಯದಾನದ (Sperm Donor) ಮೂಲಕ ಮಕ್ಕಳನ್ನು ಪಡೆಯುವ ಉಪಾಯಾವನ್ನು ಕಂಡುಕೊಂಡಿದ್ದಾರೆ. ಆದರೆ ಮಾನವನ ಆವಿಷ್ಕಾರ ಎಷ್ಟು ಉಪಕಾರಿಯೋ ಅಷ್ಟೇ ದುರ್ಬಳೆಯಾಗುವ ಅಪಾಯವಿರುತ್ತದೆ.

ಇಲ್ಲೂ ಸಹ ಆಗಿದ್ದು ಅದೆ. ಮಕ್ಕಳಿಲ್ಲವೇಂದು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದ 49 ಗೃಹಿಣಿಯರಿಗೆ ಆ ವೈದ್ಯ ಚಿಕಿತ್ಸೆ ನೆಪದಲ್ಲಿ ವಂಚಿಸಿದ್ದಾನೆ.

ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದ್ದ ಆಯುಷ್ಮಾನ್​ ಖರಾನಾ ಅಭಿನಯದ ‘ವಿಕ್ಕಿ ಡೋನರ್​’ ಸಿನಿಮಾದ ಕತೆಗೂ ಇಲ್ಲಿ ವೈದ್ಯರೊಬ್ಬರು ಮಾಡಿರುವ ವಂಚನೆಗೂ ಸ್ವಲ್ಪ ಸಾಮ್ಯತೆ ಇದೆ. ಸಿನಿಮಾದಲ್ಲಿ ವೈದ್ಯ ಮಕ್ಕಳಾಗದ ದಂಪತಿಗೆ ವೀರ್ಯಾಣು ದಾನಿ ಆಯುಷ್ಮಾನ್​ರ ವೀರ್ಯದಿಂದ ಮಕ್ಕಳ ಭಾಗ್ಯ ಕರುಣಿಸುತ್ತಾನೆ. ಆದರೆ ಇಲ್ಲಿ ವೈದ್ಯ ತಾನೇ ದಾನಿಯಾಗಿ ಮಹಿಳೆಯರಿಗೆ ಮಕ್ಕಳ ಭಾಗ್ಯ ಕರುಣಿಸಿದ್ದಾನೆ.

ಈ ಘಟನೆ ನಡೆದಿರುವುದು ಹಾಲೆಂಡ್​ನಲ್ಲಿ. ಅಲ್ಲಿ ತಾವು ಇಚ್ಚೆಪಟ್ಟವರ ವೀರ್ಯದಿಂದ ತಾಯಿಂದಿರಾಗಬೇಕೆಂದು ಬಯಸಿದ 49 ಮಂದಿ ಗೃಹಿಣಿಯರು ಜಾನ್​ ಕಾರ್ಬೆಟ್​​ ಎಂಬ ವೈದ್ಯರ ಬಳಿ ಚಿಕಿತ್ಸೆಗಾಗಿ ಹೋಗಿದ್ದಾರೆ. 89ರ ಇಳಿವಯಸ್ಸಿನ ಆ ವೈದ್ಯ ಮಹಿಳೆಯರಿಗೆ ತಿಳಿಯದಂತೆ ತನ್ನದೇ ವೀರ್ಯವನ್ನು ನೀಡಿ ಗರ್ಭ ಧರಿಸುವಂತೆ ಮಾಡಿದ್ದಾನೆ.

ಈ ಘಟನೆ ನಡೆದು ಸುಮಾರು ವರ್ಷಗಳ ನಂತರ ಈಗ ವಂಚನೆಯಾಗಿರುವುದು ಬಹಿರಂಗವಾಗಿದೆ. ಅದೂ ಸಹ ಆಶ್ಚರ್ಯಕರ ರೀತಿಯಲ್ಲಿ. ಆದರಲ್ಲೂ ದುರಂತ ಎಂದರೆ 2017ರಲ್ಲೇ ವಂಚಿಸಿ, ಚಿಕಿತ್ಸೆ ನೀಡಿದ್ದ ವೈದ್ಯ ಮೃತಪಟ್ಟಿರುವುದು.

ಈ ವೈದ್ಯನಿಂದ ಚಿಕಿತ್ಸೆ ಪಡೆದು ಮಗು ಮಾಡಿಕೊಂಡಿದ್ದ ಮಹಿಳೆಯೊಬ್ಬರು ಇತ್ತೀಚೆಗೆ ತನ್ನ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಅದಕ್ಕೆ ಕಾರಣ ತಿಳಿದು ಬಂದಿಲ್ಲ. ಪರೀಕ್ಷೆಯಿಂದ ಆಕೆ ದಾನ ಪಡೆದ ವೀರ್ಯ ಬೇರೆಯದು ಎಂಬುದು ತಿಳಿದಿದೆ. ಬಳಿಕ ಈ ಮಹಿಳೆ ಈ ಐವಿಎಫ್​ ಕೇಂದ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವೇಳೆ ಈ ಆಸ್ಪತ್ರೆಯಿಂದ ವೀರ್ಯ ದಾನ ಪಡೆದು ಅನೇಕ ತಾಯಂದಿರು ಸಹ ಡಿಎನ್​ಎ ಪರೀಕ್ಷೆಯ ಮೊರೆ ಹೋಗಿದ್ದು, ಎಲ್ಲ ಮಕ್ಕಳ ವೀರ್ಯ ಸಹ ಒಬ್ಬರದ್ದೇ ಎಂದು ತಿಳಿದಿದೆ.

ಮಕ್ಕಳಲ್ಲಿ ಪತ್ತೆಯಾಗಿರುವ ವೀರ್ಯ ಬೇರೆಯಾರದ್ದೋ ಅಲ್ಲ. ಚಿಕಿತ್ಸೆ ನೀಡಿದ ವೈದ್ಯ ಜಾನ್​ ಕಾರ್ಬೆಟ್​ ಅವರದ್ದೇ ಎಂದು ಡಿಎನ್​ಎ ವರದಿ ಹೇಳುತ್ತಿದೆ. ಆದರೆ ವಂಚಿಸಿದ ವೈದ್ಯನ ವಿರುದ್ಧ ಕ್ರಮಕೈಗೊಳ್ಳಲು ಈಗ ಆತನೇ ಇಲ್ಲ.

Comments are closed.