ಅಂತರಾಷ್ಟ್ರೀಯ

ಸೌಹಾರ್ದದ ದ್ಯೋತಕವಾಗಿ ಪಾಕ್‌ನಿಂದ ಮತ್ತೆ 100 ಭಾರತೀಯರ ಬಿಡುಗಡೆ

Pinterest LinkedIn Tumblr


ಇಸ್ಲಾಮಾಬಾದ್‌: ಭಾರತ   ಪಾಕಿಸ್ಥಾನದ ನಡುವಿನ ಸೌಹಾರ್ದದ ದ್ಯೋತಕವಾಗಿ ಪಾಕಿಸ್ಥಾನದಲ್ಲಿ ಬಂಧಿತರಾಗಿದ್ದ 100 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.

ಈ ಹಿಂದೆಯೇ ಪಾಕಿಸ್ಥಾನವು ಭಾರತದ 360 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ನಾಲ್ಕು ಹಂತಗಳಲ್ಲಿ ಇದೇ ತಿಂಗಳು ಎಲ್ಲರನ್ನೂ ಭಾರತಕ್ಕೆ ಕಳುಹಿಸುವುದಾಗಿ ಹೇಳಿತ್ತು. ಎ.17ರಂದು ಮೊದಲ ಹಂತವಾಗಿ 100 ಮೀನುಗಾರರನ್ನು ಬಿಡುಗಡೆ ಮಾಡ ಲಾಗಿತ್ತು. ಈಗ ಮತ್ತೆ 100 ಜನರ 2ನೇ ತಂಡವನ್ನು ಶನಿವಾರ ಭಾರತಕ್ಕೆ ಮರಳಿಸಿದೆ.

ಪಾಕ್‌ನ ಮಾಲಿರ್‌ ಜೈಲಿನಲ್ಲಿದ್ದ 100 ಮೀನುಗಾರರು ಶನಿವಾರ ಬಿಡುಗಡೆ ಆಗಿದ್ದಾರೆ. ಅವರನ್ನು ರೈಲಿನ ಮೂಲಕ ಲಾಹೋರ್‌ಗೆ ಕರೆದುಕೊಂಡು ಹೋಗಿ ನಂತರ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎ. 22 ಮತ್ತು 29ರಂದು ಬಾಕಿ ಸೆರೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ, ಲೋಕಸಭೆ ಚುನಾವಣೆಯ ನಂತರ ಭಾರತದೊಂದಿಗೆ ಮಾತುಕತೆ ಆರಂಭಿಸಲು ಪಾಕಿಸ್ಥಾನ ಎದುರು ನೋಡುತ್ತಿದೆ. ಮಾತುಕತೆಯಿಂದ ಉಭಯ ದೇಶಗಳು ಸಮಸ್ಯೆ ನಿವಾರಿಸಲು ನೆರವಾಗಲಿದೆ, ಅಲ್ಲದೇ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲೂ ಇದು ಸಹಾಯಕ ಎಂದು ಪಾಕ್‌ ಹೈಕಮಿಷನರ್‌ ಸೊಹೇಲ್‌ ರವಿವಾರ ಹೇಳಿದ್ದಾರೆ.

Comments are closed.