ಅಂತರಾಷ್ಟ್ರೀಯ

ಪ್ರೀತಿಸಿ ಕೈಕೊಟ್ಟ ಯುವತಿಯ ಬಗ್ಗೆ ನಗರದ ರಸ್ತೆ ಬದಿಯಲ್ಲಿ ಬೋರ್ಡ್ ಹಾಕಿದ ಯುವಕ ! ಯುವಕನ ಪ್ರತಿಕಾರ ಕಂಡು ದಂಗಾದ ಯುವತಿ

Pinterest LinkedIn Tumblr

ಈ ಪ್ರೇಮಿಗಳಿಬ್ಬರು ರಸ್ತೆ ಬದಿ ಜಗಳವಾಡುತ್ತಿರುವ ವೀಡಿಯೋ ಮತ್ತು ಬಿಲ್‌ಬೋರ್ಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೇಮಿಗಳ ಮಧ್ಯ ಬ್ರೇಕ್‌ಅಪ್ ಆಗುವುದು ಸಾಮಾನ್ಯ. ಇಂಡೋನೇಶಿಯಾದ ಈ ಯುವಕನ ಜತೆಗೂ ಹೀಗೆ ಆಯಿತು. ಆತ ಅತಿಯಾಗಿ ಪ್ರೀತಿಸಿದ್ದ ಯುವತಿ ಏಕಾಏಕಿ ಕೈ ಕೊಟ್ಟಿ ಹೋಗಿದ್ದಳು. ಇದರಿಂದ ನೊಂದ ಯುವಕ ಆಕೆಯ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ. ಅದಕ್ಕಾಗಿ ಆತ ಮಾಡಿದ್ದೇನು ಗೊತ್ತಾ?…

https://twitter.com/myxzyptlx/status/1104306786683645957

ನಗರದ ಮಧ್ಯದಲ್ಲಿ ಹಾದು ಹೋಗುವ ರಸ್ತೆಯ ಬದಿಯಲ್ಲಿ ಆಕೆಯ ವಂಚನೆ ಕುರಿತು ಬರೆದು ಫೋಟೋ ಸಮೇತ ಬಿಲ್‌ಬೋರ್ಡ್ ಹಾಕಿ ಪ್ರತೀಕಾರ ತೀರಿಸಿಕೊಂಡಿದ್ದಾನೆ.

‘ನೀನು ನನಗೆ ಮೋಸ ಮಾಡಿದ್ದೀಯ. ನನ್ನ ಹೃದಯವನ್ನು ತುಂಡು ಮಾಡಿದ್ದೀಯಾ. ನಿನ್ನಿಂದ ನಾನು ದೂರಾಗಲು ಬಯಸುತ್ತೇನೆ’ ಎಂದಾತ ಬಿಲ್‌ಬೋರ್ಡ್ ಮೇಲೆ ಬರೆದಿದ್ದಾನೆ.

ಈ ಪ್ರೇಮಿಗಳಿಬ್ಬರು ರಸ್ತೆ ಬದಿ ಜಗಳವಾಡುತ್ತಿರುವ ವೀಡಿಯೋ ಮತ್ತು ಬಿಲ್‌ಬೋರ್ಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆಟಿಜನ್ಸ್ ಇದಕ್ಕೆ ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದು, ಕೆಲವರು ಇದು ಪಬ್ಲಿಸಿಟಿ ಸ್ಟಂಟ್ ಎಂದು ಕೂಡ ಹೇಳುತ್ತಿದ್ದಾರೆ.

Comments are closed.