ಅಂತರಾಷ್ಟ್ರೀಯ

ಪುಲ್ವಾಮ ಉಗ್ರದಾಳಿ ಬೆನ್ನಲ್ಲೇ ಉಗ್ರ ಮಸೂದ್ ಅಜರ್ ಕುಟುಂಬಸ್ಥರನ್ನು ವಶಕ್ಕೆ ಪಡೆದ ಪಾಕಿಸ್ತಾನ ಸರ್ಕಾರ

Pinterest LinkedIn Tumblr

ಇಸ್ಲಾಮಾಬಾದ್: ಪುಲ್ವಾಮ ಉಗ್ರದಾಳಿ ಬೆನ್ನಲ್ಲೇ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿ ಬಳಿಕ ಇದೀಗ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ಉಗ್ರ ಮಸೂದ್ ಅಜರ್ ಕುಟುಂಬಸ್ಥರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕ ಪಡೆದಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಉಗ್ರ ಮಸೂದ್ ಅಜರ್ ಸಹೋದರ ಮುಫ್ತಿ ಅಬ್ದುಲ್ ರೌಫ್, ಮಗ ಹಮಾಜ್ ಅಜರ್ ಸೇರಿದಂತೆ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಹಲವು ನಾಯಕರನ್ನು ಕೂಡ ಪಾಕಿಸ್ತಾನ ಪೊಲೀಸರು ಸರ್ಕಾರದ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಪಾಕಿಸ್ತಾನ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇರೆಗೆ ಪಾಕಿಸ್ತಾನ ಸಂವಿಧಾನದ ಸೆಕ್ಷನ್ 44 (ನಿಷೇಧಿತ ಸಂಸ್ಥೆಗಳ ಅಡಿಯಲ್ಲಿ-ಸದಸ್ಯರ ಮೇಲೆ ನಿಗಾ) ಅಡಿಯಲ್ಲಿ ಉಗ್ರ ಮಸೂದ್ ಅಜರ್ ಸಹೋದರ ಮುಫ್ತಿ ಅಬ್ದುಲ್ ರೌಫ್, ಮಗ ಹಮಾಜ್ ಅಜರ್ ಸೇರಿದಂತೆ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಹಲವು ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಇಂತಹ ಕಠಿಣ ಕ್ರಮಗಳು ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ನೇರವಾಗಿ ಉಗ್ರ ಸಂಘಟನೆಗಳಿಗೆ ಪಾಕ್ ಸರ್ಕಾರ ಮತ್ತು ಅಲ್ಲಿನ ರಾಷ್ಟ್ರೀಯ ಭದ್ರತಾ ಸಮಿತಿ (ಎನ್ ಎಸ್ ಸಿ) ಎಚ್ಚರಿಕೆ ನೀಡಿದೆ. ಅಂತೆಯೇ ತನ್ನ ಈ ಯೋಜನೆಗಾಗಿ ಎನ್ ಎಸ್ ಸಿ ರಾಷ್ಟ್ರೀಯ ಕಾರ್ಯ ಯೋಜನೆಯನ್ನೂ ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ.

ನಿನ್ನೆಯಷ್ಟೇ ಪಾಕಿಸ್ತಾನ ಸರ್ಕಾರ ಉಗ್ರ ಹಫೀಜ್ ಸಯ್ಯೀದ್ ನೇತೃತ್ವದ ಜಮಾತ್ ಉದ್ ದವಾ ಮತ್ತು ಅದರ ಸಹೋದರ ಸಂಘಟನೆಗಳು, ಮಸೂದ್ ಅಜರ್ ನೇತೃತ್ವದ ಜೈಶ್ ಇ ಮೊಹಮದ್ ಸೇರಿದಂತೆ ಹಲವು ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು.

Comments are closed.